ಜ.6ರಂದು ಅಹಮದಾಬಾದ್‌ನಿಂದ ಮಂಗಳೂರು ಜಂಕ್ಷನ್‌ಗೆ ವಿಶೇಷ ರೈಲು

ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಅಹಮದಾಬಾದ್‌ನಿಂದ ಮಂಗಳೂರು ಜಂಕ್ಷನ್‌ಗೆ ಜ.6ರಂದು ಏಕಮುಖ ವಿಶೇಷ ರೈಲು ಓಡಾಟ ಸೌಲಭ್ಯ ಇರುತ್ತದೆ ಎಂದು ದಕ್ಷಿಣ ವಲಯದ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
ರೈಲು ಸಂಖ್ಯೆ.06072 ಅಹಮದಾಬಾದ್ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಸೇವೆಯು ಅಹಮದಾಬಾದ್ ಜಂಕ್ಷನ್‌ನಿಂದ ಜನವರಿ 2023 ಜನವರಿ 6ರಂ ಸಂಜೆ 4 ಗಂಟೆಗೆ ಹೊರಡಲಿದೆ. ಮರುದಿನ (ಜ.7) ಸಂಜೆ 6.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನಿಲುಗಡೆಗಳು: ವಡೋದರ, ಸೂರತ್, ವಾಪಿ, ವಸಾಯಿ ರಸ್ತೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್, ಕರ್ಮಾಲಿ, ಮಡಗಾಂವ್, ಕಾಂಕೋನಾ, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ನಲ್ಲಿ ರೈಲಿಗೆ ನಿಲುಗಡೆ ಇರುತ್ತದೆ.
ಕೋಚ್ ಸಂಯೋಜನೆ: ಎಸಿ 3-ಟೈರ್ ಕೋಚ್‌ಗಳು-5, ಸ್ಲೀಪರ್ ಕ್ಲಾಸ್ ಕೋಚ್‌ಗಳು-12, ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್‌ಗಳು-3 ಮತ್ತು ಲಗೇಜ್ ಕಮ್ ಬ್ರೇಕ್ ವ್ಯಾನ್ ಕೋಚ್‌ಗಳು-2 ಇರುತ್ತವೆ ಎಂದು ಪ್ರಕಟನೆ ತಿಳಿಸಿದೆ.





