ಪುತ್ತೂರು: ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

ಪುತ್ತೂರು: ಕೋವಿಡ್‍ನಿಂದಾಗಿ ಮೃತಪಟ್ಟಿರುವ ಪುತ್ತೂರು ತಾಲೂಕಿನ ಇಬ್ಬರ ಕುಟುಂಬಕ್ಕೆ ಶಾಸಕ ಸಂಜೀವ ಮಠಂದೂರು ಅವರು ಪರಿಹಾರದ ಚೆಕ್ ವಿತರಿಸಿದರು.
ಕೋವಿಡ್‍ನಿಂದಾಗಿ ಮೃತಪಟ್ಟ ಬಡಗನ್ನೂರು ಗ್ರಾಮದ ಪಟ್ಟೆ-ಕುದ್ರೆಮಜಲು ನಿವಾಸಿ ಜನಾರ್ಧನ್ ಅವರ ಪತ್ನಿ ಬೇಬಿ ಹಾಗೂ ಪಡುವನ್ನೂರು ಗ್ರಾಮದ ಪಡುಮಲೆ ಇಂಕ್ರುಡಿನ್ ಡಿ.ಸೋಜಾ ಅವರ ಪತ್ನಿ ಐರಿನ್ ಡಿ,ಸೋಜಾ ಅವರಿಗೆ ಪುತ್ತೂರಿನ ದರ್ಬೆಯಲ್ಲಿರು ಪ್ರವಾಸಿ ಮಂದಿರದಲ್ಲಿ ತಲಾ ರೂ.1ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಲಾಯಿತು.
ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ಮತ್ತು ನಿತೀಶ್‍ಕುಮಾರ್ ಶಾಂತಿವನ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಶೆಟ್ಟಿ ಮತ್ತು ಯುವರಾಜ್ ಪರಿಯತ್ತೋಡಿ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.
Next Story





