ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಹಗರಣ: ಬಂಧಿತರ ಸಂಖ್ಯೆ 48ಕ್ಕೆ

ಬೆಂಗಳೂರು, ಜ.4: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಬಂಧಿಸಲಾಗಿದ್ದು, ಒಟ್ಟು 48 ಮಂದಿಯನ್ನು ಬಂಧಿಸಲಾಗಿದೆ.
ಮೂಡಲಗಿ ತಾಲೂಕಿನ ರಾಜಾಪುರದ ಚಿದಾನಂದ ಚಿನ್ನಪ್ಪ(27), ಗೋಕಾಕ ತಾಲೂಕಿನ ಮಲ್ಲಾಪುರ ಪಿ.ಜಿ.ಗ್ರಾಮದ ಅಣ್ಣಪ್ಪ ಕೆಂಪಣ್ಣ ಮಾರವಾಡಿ(31), ಶಿವಾಪುರದ ಜಾನ್‍ರಾಬರ್ಟ್ ಯಶವಂತ ಬಂಗೆನ್ನವರ(26) ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಎಲ್ಲ ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಬಳಸಿ, ಮೂವರು ಆರೋಪಿಗಳು ಪರೀಕ್ಷೆ ಬರೆದಿದ್ದರು. ಅವರಿಂದ ಅಕ್ರಮಕ್ಕೆ ಬಳಸಿದ ಎಲ್ಲ ಸಾಮಗ್ರಿಗಳ ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Next Story





