ಮಂಗಳೂರು: ಕ್ರಿಸ್ಮಸ್ ಕಾರ್ಡ್ ಸ್ಪರ್ಧೆಯ ಫಲಿತಾಂಶ ಪ್ರಕಟ

ಮಂಗಳೂರು: ನಗರದ ಪಾಲ್ದನೆಯ ಸಂತ ತೆರೆಝಾ ಚರ್ಚ್‌ನಲ್ಲಿ ಕ್ರಿಸ್ಮಸ್ ಪ್ರಯುಕ್ತ ಸ್ವಾಭಾವಿ ವಸ್ತುಗಳಿಂದ ತಯಾರಿಸಿದ ಹಾಗೂ ಕ್ರಿಸ್ಮಸ್ ಸಂದೇಶ ಸಾರುವ ಕ್ರಿಸ್ಮಸ್ ಕಾರ್ಡು ಸ್ಪರ್ಧೆಯನ್ನು ನಡೆಸಲಾಯಿತು.
ಲೊಯೆಲ್ಲಾ ಮನೆ ಬಿಜೈ ಇದರ ನಿರ್ದೇಶಕ ವಂ. ಫಾ. ಅನುಶ್ ಡಿಕುನ್ಹಾ ಹಾಗೂ ನಿವೃತ್ತ ಶಿಕ್ಷಕಿ ಫೆಲ್ಸಿ ಪಿಂಟೊ ತೀರ್ಪುಗಾರರಾಗಿ ಸಹಕರಿಸಿದರು.
ಈ ಸಂದರ್ಭ ಚರ್ಚ್ ನ ಪ್ರಧಾನ ಧರ್ಮಗುರು ವಂ.ಫಾ. ಆಲ್ಬನ್ ಡಿಸೋಜ, ಉಪಾಧ್ಯಕ್ಷ ವಿಲಿಯಂ ಲೊಬೊ, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸಂಚಾಲಕ ವಿಲಿಯಂ ಫೆರ್ನಾಂಡಿಸ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ರೋಶನ್ ಕ್ರಾಸ್ತಾ, ಸದಸ್ಯ ರೋಶನ್ ಮೊಂತೇರೊ, ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಪ್ರಥಮ ಬಹುಮಾನ ಲೀರೋನ್ ನೆಶ್ಯನ್ ಮೆಂಡೊನ್ಸಾ (ಸಂತ ಝೆರ್ ವಾರ್ಡ್), ದ್ವಿತೀಯ ಬಹುಮಾನ ರೀಶಲ್ ಡಿಸೋಜ ( ಸಂತ ಸಬೆಸ್ಟಿನ್ ವಾರ್ಡ್), ತೃತೀಯ ಬಹುಮಾನ ಲೀನೊರಾ ಆಡ್ಲಿನ್ ಫೆರ್ನಾಂಡಿಸ್ ( ಸೆಕ್ರೆಡ್ ಹಾರ್ಟ್ ವಾರ್ಡ್) ಪಡೆದರು.
Next Story