Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ: ಹಾಲಾಡಿಯ ಹುಯ್ಯಾರಿನಲ್ಲಿ ಅಪರೂಪದ...

ಉಡುಪಿ: ಹಾಲಾಡಿಯ ಹುಯ್ಯಾರಿನಲ್ಲಿ ಅಪರೂಪದ ಶಿಲಾಶಾಸನ ಪತ್ತೆ

4 Jan 2023 7:06 PM IST
share
ಉಡುಪಿ: ಹಾಲಾಡಿಯ ಹುಯ್ಯಾರಿನಲ್ಲಿ ಅಪರೂಪದ ಶಿಲಾಶಾಸನ ಪತ್ತೆ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು 76, ಹಾಲಾಡಿಯ ಹುಯ್ಯಾರುವಿನಲ್ಲಿ ಅತಿ ವಿರಳ ಎನ್ನಬಹುದಾದ ಶಿಲಾಶಾಸನವೊಂದು ಪತ್ತೆ ಯಾಗಿದೆ. ಹುಯ್ಯಾರು ಪಟೇಲ್ ದಿ.ಹಿರಿಯಣ್ಣ ಶೆಟ್ಟಿ ಕುಟುಂಬಿಕರ ಜಾಗದಲ್ಲಿ ಈ ಶಾಸನ ಕಂಡುಬಂದಿದೆ. 

ಸುಮಾರು 10 ಅಡಿ ಎತ್ತರ, 5 ಅಡಿ ಅಗಲ ಮತ್ತು 3.5 ಇಂಚು ದಪ್ಪ ಗ್ರಾನೈಟ್ ಶಿಲೆಯಲ್ಲಿ ಶಾಸನವನ್ನು ರಚಿಸಲಾಗಿದೆ. ಆಯತಾಕಾರದ ರಚನೆಯನ್ನು ಹೊಂದಿರುವ ಇದರ ಮೇಲ್ಭಾಗವನ್ನು ಕೋನಾಕೃತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಶಾಸನವನ್ನು ಎರಡು ಪಟ್ಟಿಕೆಗಳನ್ನಾಗಿ ವಿಂಗಡಿಸಲಾಗಿದ್ದು, ಮೇಲಿನ ಕೋನಾಕೃತಿಯ ಪಟ್ಟಿಕೆಯ ಮೇಲೆ ಎಂಟು ಸಾಲುಗಳಲ್ಲಿ ಶಾಸನವನ್ನು ಬರೆಯಲಾಗಿದೆ. ಬರವಣಿಗೆ ಪೂರ್ಣವಾಗಿ ಸವೆದುಹೋಗಿದ್ದು, ಅಲ್ಲೊಂದು ಇಲ್ಲೊಂದು ಅಕ್ಷರಗಳನ್ನು ಕಂಪ್ಯೂಟರ್ ನೆರನೊಂದಿಗೆ ಗುರುತಿಸಬಹುದಾಗಿದೆ. 

ಶಾಸನದ ಮೂರನೇ ಸಾಲಿನಲ್ಲಿ ಬಸವ ..... ಸೋ ..... ಎಂಬ ಅಕ್ಷರಗಳನ್ನು ಗುರುತಿಸಲು ಸಾದ್ಯವಾಗಿದೆ. ಶಾಸನೋಕ್ತ ಈ ಅಕ್ಷರಗಳ ನೆರನಿಂದ ಪ್ರಸ್ತುತ ಶಾಸನ ಆಳುಪ ಚಕ್ರವರ್ತಿ ಬಸವ ಶಂಕರ ಸೋಯಿದೇವನ ಶಾಸನವೆಂದು ನಿರ್ಧರಿಸಬಹುದಾಗಿದೆ. ಶಿಲ್ಪಗಳ ನಡುವಿನಲ್ಲಿ ವಸಂತಯ್ಯನ ಬರಹ ಎಂದಿದೆ ಎಂದು ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

ಶಾಸನದ ಎರಡನೇ ಪಟ್ಟಿಕೆಯಲ್ಲಿ ಶಿಲ್ಪಗಳನ್ನು ಕಂಡರಿಸಲಾಗಿದೆ. ಈ ಪಟ್ಟಿಕೆಯ ಮಧ್ಯಭಾಗದಲ್ಲಿ ದೊಡ್ಡ ಶಿವಲಿಂಗವನ್ನು ಚಿತ್ರಿಸಲಾಗಿದ್ದು, ಅದರ ಕೆಳಭಾಗದಲ್ಲಿ ಶಿವಲಿಂಗವನ್ನು ಹೊತ್ತು ಕುಳಿತ ನಂದಿಯ ಶಿಲ್ಪವನ್ನು ಚಿತ್ರಿಸಲಾಗಿದೆ. ನಂದಿವಾಹನ ಶಿವಲಿಂಗದ ಬಲಭಾಗದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಶಿಲ್ಪವಿದೆ. ಎಡಭಾಗದಲ್ಲಿ ದೊಡ್ಡ ನಂದಿಯ ಶಿಲ್ಪವಿದೆ. ಇದರ ಕೆಳಭಾಗದಲ್ಲಿ ಒಂದು ಅಧಿಷ್ಠಾನದ ಮೇಲೆ ನಿಂತಿರುವ ನಂದಿಯ ಶಿಲ್ಪವಿದೆ. ಇಡೀ ಪಟ್ಟಿಕೆಯ ಶಿಲ್ಪದ ಚಿತ್ರಣವೇ ಅತ್ಯಂತ ಕೌತುಕ ಹಾಗೂ ಅಪರೂಪದ ಉದಾಹರಣೆಯಾಗಿದೆ ಎಂದು ಪ್ರೊ.ಟಿ. ಮುರುಗೇಶಿ ಹೇಳಿದ್ದಾರೆ. 

ಶಾಸನದ ಮಹತ್ವ: ಈ ಶಾಸನ ಕರ್ನಾಟಕದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಬಹಳ ಮಹತ್ವಪೂರ್ಣವಾದ ಒಂದು ಶಾಸನವಾಗಿದೆ. ಶಾಸನದ ಕೆಳಗಿನ ಪಟ್ಟಿಕೆಯಲ್ಲಿ ಚಿತ್ರಿಸಿರುವ ಅಲಂಕೃತ ನಂದಿವಾಹನ ಶಿವಲಿಂಗವು ಸಾಂಕೇತಿಕವಾಗಿ ಆಳುಪ ಚಕ್ರವರ್ತಿ ಸೋಯಿದೇವನ ಪ್ರತಿರೂಪವಾಗಿದೆ. ಸೋಯಿದೇವನ ಹೆಚ್ಚಿನ ಶಾಸನಗಳಲ್ಲಿ ಆತನನ್ನು ಬಸವ ಶಂಕರ ಸೋಯಿದೇವನೆಂದೇ ಹೆಸರಿಸಲಾಗಿದೆ. ಚಿತ್ರಿತ ಶಿಲ್ಪದ ನಂದಿ ಆತನ ಬಸವ ಎಂಬ ಬಿರುದಿನ ಸಂಕೇತವಾದರೆ, ಶಿವಲಿಂಗವು ಶಂಕರ ಎಂಬ ಹೆಸರಿನ ಸಂಕೇತವಾಗಿದೆ ಎನ್ನಲಾಗಿದೆ. 

ಈ ಶಿಲ್ಪದ ಬಲಭಾಗದಲ್ಲಿ ಹಾಲೂಡಿಸುತ್ತಿರುವ ಹಸುವಿನ ಚಿತ್ರವು ಬ್ರಾಹ್ಮಣ ಭೋಜನಕ್ಕೆ ನೀಡಿದ ದಾನದ ಸಂಕೇತವಾಗಿದೆ. ಹುಯ್ಯಾರು ಇಂದಿಗೂ ನಂದಿ ಪಂಥದ ಪ್ರಮುಖ ನೆಲೆಯಾಗಿದೆ. ಎಡಭಾಗದಲ್ಲಿ ನಿಂತಿರುವ ದೊಡ್ಡನಂದಿಯು ಹ್ಯಾಗುಳಿಯ ಶಿಲ್ಪವಾಗಿದ್ದು, ಅದರ ಕೆಳಭಾಗ ದಲ್ಲಿ ಪೀಠದ ಮೇಲೆ ನಿಂತಿರುವ ಚಿಕ್ಕ ನಂದಿಯು ಗೆಂಡದ ಹ್ಯಾಗುಳಿಯ ಸಂಕೇತವಾಗಿದೆ. ಇದರಿಂದ ಪಟ್ಟಿಕೆಯಲ್ಲಿ ಚಿತ್ರಿತ ಶಿಲ್ಪಗಳು ಇತರೆ ಶಾಸನಗಳಲ್ಲಿ ಕಂಡು ಬರುವ ಶಿವಲಿಂಗ, ನಂದಿ, ಸೂರ್ಯ-ಚಂದ್ರರ ಶಿಲ್ಪಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಸ್ಥಳೀಯ ಸಂಸ್ಕೃತಿಯ ಪ್ರಾತಿನಿಧಿಕ ಚಿತ್ರಣಗಳಾಗಿವೆ ಎಂದು ನಿರ್ಧರಿಸಬಹುದಾಗಿದೆ ಎಂದರು. 

ಅರ್ಧ ಭೂಮಿಯಲ್ಲಿ ಹೂತು ಹೋಗಿದ್ದ ಈ ಶಾಸನದ ಕಲ್ಲನ್ನು ಅಗೆದು ತೆಗೆದು ಅಧ್ಯಯನಕ್ಕೆ ಸಹಕರಿಸಿದ ತನ್ನ ವಿದ್ಯಾರ್ಥಿಗಳು ಹಾಗೂ ಶಾಸನದ ಅಧ್ಯಯನಕ್ಕೆ ಆಹ್ವಾನಿಸಿದ 76, ಹಾಲಾಡಿ ಗ್ರಾಪಂನ ಸದಸ್ಯರಾದ ಚೋರಡಿ ಅಶೋಕ್ ಶೆಟ್ಟಿ, ಹುಯ್ಯಾರು ಮುರುಳೀಧರ ಶೆಟ್ಟಿ ಮತ್ತು ರಾಜೀವ್ ಶೆಟ್ಟಿರಿಗೆ ಕೃತಜ್ಞನಾಗಿರುವುದಾಗಿ ಪ್ರೊ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share
Next Story
X