ತಲಪಾಡಿ ಕೆ.ಸಿ.ರೋಡ್‌ನಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆ

ಮಂಗಳೂರು: ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾ ಹರೇಕಳ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ತಲಪಾಡಿ ಗ್ರಾಮ ಕಾಂಗ್ರೆಸ್ ಸಮಿತಿಯ ವತಿಯಿಂದ ಪೂರ್ವಭಾವಿ ಸಭೆಯು ಕೆ.ಸಿ ರೋಡ್ ಜಂಕ್ಷನ್‌ನಲ್ಲಿ ಬುಧವಾರ ನಡೆಯಿತು.
ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಗುರುವಾರ ಹರೇಕಳ ಕಡವಿನ ಬಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪಡಿತರ ಚೀಟಿ, ವಿದ್ಯಾರ್ಥಿವೇತನವನ್ನು ಕೊಡಲು ಯೋಗ್ಯತೆ ಇಲ್ಲದ, ಸಂವಿಧಾನ ವಿರೋಧಿ ಬಿಜೆಪಿ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು. ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರಿಗೆ ಬದುಕಲು ಕಷ್ಟವಿದೆ. ಹಸಿದವರಿಗೆ ಊಟ ಕೊಡುವ ಇಂದಿರಾ ಕ್ಯಾಂಟೀನನ್ನು ಮುಚ್ಚಲು ಹೊರಟಿರುವುದು ಖಂಡನೀಯ ಎಂದರು.
ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಖಾದರ್ ತಲಪಾಡಿ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ತಾಪಂ ಮಾಜಿ ಸದಸ್ಯರಾದ ಸುರೇಖ ಚಂದ್ರಹಾಸ್, ಸಿದ್ದೀಕ್ ತಲಪಾಡಿ, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪಿರೋಝ್ ಮಲಾರ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎಸ್ ನಾಸೀರ್, ಮಂಗಳೂರು ನಗರ ಇಂಟಕ್ ಮಹಿಳಾ ಅಧ್ಯಕ್ಷೆ ಕಲಾವತಿ, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಫ ಅಬ್ದುಲ್ಲ, ಉಳ್ಳಾಲ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ವಕ್ತಾರರಾದ ದಿನೇಶ್ ರೈ, ರವಿರಾಜ್ ಶೆಟ್ಟಿ, ಪ್ರಮುಖರಾದ ಜಯಂತಿ ಪಕ್ಕಳ, ಗೋಪಾಲ್ ಶೆಟ್ಟಿ, ಮೊಯಿದಿನ್ ಬಾವ, ವೈಭವ್ ಶೆಟ್ಟಿ, ವಿನು ಶೆಟ್ಟಿ, ಗೋಪಾಲ್ ತಚ್ಚಾಣಿ, ಖಾದರ್ ಮಖ್ಯಾರ್, ಇಬ್ರಾಹಿಂ ಕೆ.ಸಿ.ರೋಡ್, ಹಸೈನಾರ್, ಇಬ್ರಾಹಿಂ ತಲಪಾಡಿ, ಸಲಾಂ ಕೆ.ಸಿ.ರೋಡ್, ಅಶ್ರಫ್, ಸಲಾಂ ಪಿಲಿಕೂರ್, ಶಬೀರ್ ಕೆ.ಸಿ.ರೋಡ್, ಸತ್ತಾರ್ ಕೆ.ಸಿ.ರೋಡ್, ಅಹ್ಮದ್ ಅಜ್ಜಿನಡ್ಕ, ಇಸಾಕ್, ಸಲಾಂ ಉಚ್ಚಿಲ್, ಹಸೈನಾರ್, ಲತಾ ತಲಪಾಡಿ, ಮನ್ಸೂರ್ ಉಳ್ಳಾಲ್ ಉಪಸ್ಥಿತರಿದ್ದರು.







