ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟಿ ಮರುನೇಮಕ

ವಾಷಿಂಗ್ಟನ್, ಜ.4: ಲಾಸ್ ಏಂಜಲೀಸ್‍ನ ಮಾಜಿ ಮೇಯರ್ ಎರಿಕ್ ಗಾರ್ಸೆಟಿಯನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಮರು ನೇಮಕಗೊಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
`ಕ್ಯಾಲಿಫೋರ್ನಿಯಾದ ಎರಿಕ್ ಗಾರ್ಸೆಟಿಯನ್ನು ಭಾರತಕ್ಕೆ ರಾಯಭಾರಿಯಾಗಿ ನೇಮಿಸಲಾಗಿದ್ದು ಈ ಕುರಿತ ಪ್ರಸ್ತಾವನೆಯನ್ನು ಸೆನೆಟ್‍ಗೆ ರವಾನಿಸಲಾಗಿದ್ದು ಸೆನೆಟ್ ಅನುಮೋದನೆ ದೊರಕುವ ಖಾತರಿಯಿದೆ' ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ಭಾರತದೊಂದಿಗೆ ನಮ್ಮ ಸಂಬಂಧವು ನಿರ್ಣಾಯಕವಾಗಿದೆ ಮತ್ತು ಪರಿಣಾಮಕಾರಿಯಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪೂರಕವಾಗಿ, ಭಾರತಕ್ಕೆ ರಾಯಭಾರಿಯಾಗಿ ಸೇವೆ ಸಲ್ಲಿಸಲು ಸರ್ವಾನುಮತದಿಂದ ಮತ್ತು ಎರಡೂ ಪಕ್ಷಗಳ ಬೆಂಬಲದಿಂದ ಎರಿಕ್ ಗಾರ್ಸೆಟಿ ಅವರ ಹೆಸರನ್ನು ಪ್ರಸ್ತಾವಿಸಲಾಗಿದೆ. ಇದಕ್ಕೆ ಸೆನೆಟ್ ಅನುಮೋದನೆ ದೊರಕುವ ಖಾತರಿಯಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಹೇಳಿದ್ದಾರೆ.
Next Story