ಮೂಡುಬಿದಿರೆ: ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಭಾರತೀಯ ಮಜ್ದೂರು ಸಂಘ ಆಗ್ರಹ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಭಾರತೀಯ ಮಜ್ದೂರು ಸಂಘ ಮೂಡುಬಿದಿರೆ ತಾಲೂಕು ಸಮಿತಿ ಆಗ್ರಹಿಸಿದೆ.
ಮೂಡುಬಿದಿರೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಕಾರ್ಮಿಕರ ನೋಂದಣಿ, ನವೀಕರಣ ಹಾಗೂ ಇತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಗ್ಲೋಬಬ್ ಸಾಫ್ಟವೇರ್ ತಂತ್ರಾಂಶದಲ್ಲಿ ಯೋಜಿಸಿದ್ದು, ಸಂಘದ ಸದಸ್ಯರಿಗೆ ಸೇವೆ ನೀಡಲು ಸೌಲಭ್ಯಗಳಿಗೆ ಹಾಗೂ ಕಟ್ಟಡ ಕಾರ್ಮಿಕರ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸಂಘಕ್ಕೆ ಐಡಿ ನೀಡಬೇಕು. ಕಾರ್ಮಿಕರಿಗೆ ಆಸ್ಪತ್ರೆ ವೆಚ್ಚ ಪೂರ್ತಿಯಾಗಿ ಲಭಿಸಲು ಅಥವಾ ನಗದು ರಹಿತ ಚಿಕಿತ್ಸೆ ದೊರಕಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮನೆ ಹಾಗೂ ನಿವೇಶನವನ್ನು ನೀಡಬೇಕು. ಇದಕ್ಕಾಗಿ ದಾಖಲೆಗಳನ್ನು ನಿಯಮಗಳನ್ನು ಸರಳೀಕರಣಗೊಳಿಸಬೇಕು. ಸೈಟ್ ಖರೀದಿಗೆ 5 ಲಕ್ಷ ಸಾಲ, 5 ಲಕ್ಷ ರೂ. ಸಬ್ಸಿಡಿ ನೀಡಬೇಕು. ಮರಣ ಹೊಂದಿದ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಹಾಗೂ ಇತರ ಆರ್ಥಿಕ ಸಹಾಯವನ್ನು ಮಾಡುವ ಯೋಜನೆ ಜಾರಿಗೆ ತರಬೇಕು. ಸಹಜ ಮರಣಕ್ಕೆ 2 ಲಕ್ಷ ಪರಿಹಾರ ನೀಡಬೇಕು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘವು ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ, ಪ್ರಧಾನ ಕಾಯದರ್ಶಿ ಸಂದೀಪ್ ಶೆಟ್ಟಿ, ತಾಲೂಕು ಪ್ರಭಾರಿ ಪ್ರಮೋದ್ ರಾಜ್ ಪೆರಾಡಿ, ಉಪಾಧ್ಯಕ್ಷರಾದ ಜಯರಾಮ್ ರಾವ್, ಪದ್ಮನಾಭ, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಸದಸ್ಯರಾದ ಸುಕೇಶ್ ಪೂಜಾರಿ, ಕಿಶೋರ್ ಉಪಸ್ಥಿತರಿದ್ದರು.





