ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಮಸೂದ್ ಪುನರಾಯ್ಕೆ: ದಾರುನ್ನೂರ್ ವತಿಯಿಂದ ಸನ್ಮಾನ

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಮಸೂದ್ ಪುನರಾಯ್ಕೆ: ದಾರುನ್ನೂರ್ ವತಿಯಿಂದ ಸನ್ಮಾನ
ಮಂಗಳೂರು: ಮುಸ್ಲಿಮ್ ಸೆಂಟ್ರಲ್ ಕಮಿಟಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಾಜಿ ಮುಹಮ್ಮದ್ ಮಸೂದ್ ಅವರನ್ನು ದಾರುನ್ನೂರ್ ಕೇಂದ್ರ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ಮಸೂದ್ ಹಾಜಿಯವರಿಗೆ ಮುಸ್ಲಿಂ ಸೆಂಟ್ರಲ್ ಸಮಿತಿಯ ಮೂಲಕ ಇನ್ನಷ್ಟು ಸಮಾಜ ಸೇವೆಯನ್ನು ಸಲ್ಲಿಸಲು ದೇವರು ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ದಾರುನ್ನೂರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಹಾಜಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಇಬ್ರಾಹಿಂ ಹಾಜಿ ಕೊಡಿಜಾಲ್, ಕೋಶಾಧಿಕಾರಿ ಹಾಜಿ ಉಸ್ಮಾನ್ ಏರ್ ಇಂಡಿಯಾ ತೋಡಾರ್, ಜೊತೆ ಕಾರ್ಯದರ್ಶಿಗಳಾದ ಮುಹಮ್ಮದ್ ಬಪ್ಪಳಿಗೆ, ಅದ್ದು ಹಾಜಿ, ಲೆಕ್ಕ ಪರಿಶೋಧಕರಾದ ಅಬುಶಾಲಿ ಹಾಸ್ಕೋ, ಎಂ.ಜಿ ಮುಹಮ್ಮದ್ ಹಾಜಿ ತೋಡಾರ್, ಸದಸ್ಯರಾದ ಮುಹಮ್ಮದ್ ಹನೀಫ್ ಹಾಜಿ, ಶಾಲಿ ತಂಙಲ್, ದಾರುನ್ನೂರ್ ಮುಖ್ಯ ಶಿಕ್ಷಕರಾದ ಹುಸೈನ್ ರಹ್ಮಾನಿ, ವ್ಯವಸ್ಥಾಪಕರಾದ ಅಬ್ದುಲ್ ಹಕೀಮ್, ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರುಗಳಾದ ಫಕೀರಬ್ಬ ಮಾಸ್ಟರ್, ಜಮಾಲ್, ದಾರುನ್ನೂರ್ ಹಿತೈಷಿ ಅಬ್ಬಾಸ್, ಅಸ್ಲಮ್ ಉಪಸ್ಥಿತರಿದ್ದರು.
ದಾರುನ್ನೂರ್ ಕೇಂದ್ರ ಸಮಿತಿ ಯ ಕೋಶಾಧಿಕಾರಿಯಾದ ಉಸ್ಮಾನ್ ಹಾಜಿ ಎರ್ ಇಂಡಿಯಾರವರು, ಇತ್ತೀಚೆಗೆ ನಮ್ಮನಗಲಿದ ದಾರುನ್ನೂರ್ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಯಾದ ಮರ್ಹೂಮ್ ನೌಶಾದ್ ಹಾಜಿ ಸೂರಲ್ಪಾಡಿಯವರು ದಾರುನ್ನೂರ್ ಗಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.