ಎಸ್.ಎಂ. ಕೃಷ್ಣ ಸಕ್ರಿಯ ರಾಜಕೀಯದಿಂದ ನಿವೃತ್ತಿ: ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಜ.5: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ತಾವು 90 ವರ್ಷ ವಯಸ್ಸನ್ನು ದಾಟಿರುವುದರಿಂದ, ಸಕ್ರಿಯ ರಾಜಕಾರಣದಲ್ಲಿ ಇರಲು ಬಯಸುವುದಿಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಎಸ್‌ಎಂ ಕೃಷ್ಣ ಅವರ ಈ ನಿರ್ಧಾರಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ''ಕಾಂಗ್ರೆಸ್‌ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ S M ಕೃಷ್ಣರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ'' ಎಂದು ಆರೋಪಿಸಿದೆ.
''ಹಿರಿಯ ನಾಯಕ, ಮಾಜಿ ಸಿಎಂ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸು ಬಿಜೆಪಿಗರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ. ಬಿಜೆಪಿ ಸಿದ್ದಂತಗಳು ಕೃಷ್ಣರಿಗೆ ಅಪಥ್ಯವಾದವೇ ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
''ನಮ್ಮ ವಯಸ್ಸಿನ ಬಗ್ಗೆ ನಮಗೆ ಅರಿವಿರಬೇಕು. 90ರಲ್ಲಿ 50 ವರ್ಷದವರ ರೀತಿಯಲ್ಲಿ ನಟನೆ ಮಾಡಲು ಆಗುವುದಿಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಎಂದು ತೀರ್ಮಾನ ಮಾಡಿದ್ದೇನೆ. ಹೀಗಾಗಿಯೇ ನಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ'' ಎಂದು ಎಸ್.ಎಂ. ಕೃಷ್ಣ ಬುಧವಾರ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ S M ಕೃಷ್ಣರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.
— Karnataka Congress (@INCKarnataka) January 4, 2023
ಹಿರಿಯ ನಾಯಕ, ಮಾಜಿ ಸಿಎಂ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸು ಬಿಜೆಪಿಗರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ.
ಬಿಜೆಪಿ ಸಿದ್ದಂತಗಳು ಕೃಷ್ಣರಿಗೆ ಅಪಥ್ಯವಾದವೇ ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ? pic.twitter.com/FDpF4p8bUO