ಮಂಗಳೂರು: ಹಿದಾಯ ಫೌಂಢೇಶನ್ ವತಿಯಿಂದ ನೌಶಾದ್ ಹಾಜಿ ಅವರಿಗೆ ಸಂತಾಪ ಸೂಚಕ ಸಭೆ

ಮಂಗಳೂರು: ಜನಸಾಮಾನ್ಯರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಮರ್ಹೂಂ ನೌಶಾದ್ ಹಾಜಿ ಸೂರಲ್ಪಾಡಿ, ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಬಡ, ಅನಾಥ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡಿದ್ದರು. ಇದರಿಂದ ನೂರಾರು ಹೆಣ್ಣು ಮಕ್ಕಳ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದರು ಎಂದು ಹಿದಾಯ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ತಿಳಿಸಿದ್ದಾರೆ.
ಅವರು ಇತ್ತೀಚಿಗೆ ಅಪಘಾತದಲ್ಲಿ ಮರಣ ಹೊಂದಿದ ನೌಶಾದ್ ಹಾಜಿ ಸೂರಲ್ಪಾಡಿ ಅವರಿಗೆ ಹಿದಾಯ ಫೌಂಡೇಶನ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಂಗಳವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ಸಮಾಜದ ಸರ್ವರೊಂದಿಗೆ ಸದಾ ಬೆರೆಯುತ್ತಿದ್ದ ಅವರ ಗುಣ ಮಾದರಿಯಾದುದು ಎಂದು ಈ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟ ಕಾರಿನ ಚಾಲಕ ಮುಶರಫ್ ಅವರಿಗೂ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆಬಿದ್ ಅಸ್ಗರ್, ಕೋಶಾಧಿಕಾರಿ ಎಫ್ ಎಂ ಬಶೀರ್, ಕಾರ್ಯದರ್ಶಿ ಅಬ್ದುಲ್ ರಝಾಕ್ ಅನಂತಾಡಿ, ಉಪಾಧ್ಯಕ್ಷ ಆಸಿಫ್ ಇಕ್ಬಾಲ್, ಬಿ ಎಂ ತುಂಬೆ, ಅಬ್ದುಲ್ ಹಕೀಂ ಕಲಾಯಿ, ಅಬ್ದುಲ್ ರವೂಫ್, ಅಬ್ದುಲ್ ಸಲಾಂ, ಸಿಬ್ಬಂದಿಗಳಾದ ಅನ್ವರ್ ಸಾಹಿಲ್, ಅಲ್ತಾಫ್ ಅಹಮದ್, ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದರು.







