ಕುಂದಾಪುರ: ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್‌ಸಿಡಿ ವಿಭಾಗ, ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಅಸಾಂಕ್ರಾಮಿಕ ರೋಗಗಳ ಕುಂದಾಪುರ ಘಟಕ, ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಮಹಿಳಾ ಆರೋಗ್ಯ ಮತ್ತು ಅಸಾಂಕ್ರಾಮಿಕ ರೋಗಗಳ (ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹ) ತಪಾಸಣಾ ಶಿಬಿರವನ್ನು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದವು.
ಕುಂದಾಪುರ ತಾಲೂಕು ಆಸ್ಪತ್ರೆ ಆಡಳಿತಾತ್ಮಕ ಶಸ್ತ್ರಚಿಕಿತ್ಸಕ ಡಾ. ರಾಬರ್ಟ್ ರೆಬೆಲ್ಲೊ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜನರು ಕ್ಯಾನ್ಸರ್, ಮಧುಮೇಹದಂತ ಅಸಾಂಕ್ರಾಮಿಕ ರೋಗಗಳ ಪತ್ತೆಗೆ ಆಗಾಗ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅಗತ್ಯತೆಯನ್ನು ವಿವರಿಸಿದರು.
ಕುಂದಾಪುರದ ಚಿಕಿತ್ಸಕ ಡಾ.ನಾಗೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಸಾಲಿಯಾನ್, ಇಂತಹ ಆರೋಗ್ಯ ಶಿಬಿರಗಳು ಹಳ್ಳಿ, ಹಳ್ಳಿಗೂ ತಲುಪಿ ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿ ಎಂದು ಹಾರೈಸಿದರು.
ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಮಾಹಿತಿಗಳನ್ನು ನೀಡಿದರು.
ಲಯನ್ಸ್ ಕ್ಲಬ್‌ನ ಭಾಸ್ಕರ್ ಆಚಾರ್ಯ, ಶಂಕರ್ ಪೂಜಾರಿ, ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಡಾ.ಅನುಷ್ಕ ವೇದಿಕೆಯಲ್ಲಿದ್ದರು.
ಕುಂದಾಪುರ ಎನ್‌ಸಿಡಿ ವಿಭಾಗದ ಅನ್ನಪೂರ್ಣ,ಸಮುದಾಯ ವೈದ್ಯಕೀಯ ವಿಭಾಗದ ಕ್ಲೆರಾ, ಪುಷ್ಪಾ, ಸುಲೊಚನಾ, ಜಯಶ್ರೀ, ಸುಶೀಲಾ, ಲಕ್ಷ್ಮೀ, ಗೀತಾ ಭಾಗವಹಿಸಿ ವೀಣಾ ಕಾರ್ಯಕ್ರಮ ನಿರೂಪಿಸಿದರು.







