ಐದು ದಿನಗಳಲ್ಲಿ ದಿಲ್ಲಿಯಲ್ಲಿ ಎರಡನೇ ಬಾರಿ ಭೂಕಂಪನ ಅನುಭವ
![ಐದು ದಿನಗಳಲ್ಲಿ ದಿಲ್ಲಿಯಲ್ಲಿ ಎರಡನೇ ಬಾರಿ ಭೂಕಂಪನ ಅನುಭವ ಐದು ದಿನಗಳಲ್ಲಿ ದಿಲ್ಲಿಯಲ್ಲಿ ಎರಡನೇ ಬಾರಿ ಭೂಕಂಪನ ಅನುಭವ](https://www.varthabharati.in/sites/default/files/images/articles/2023/01/5/362650-1672934208.jpg)
ಹೊಸದಿಲ್ಲಿ: ಅಫ್ಘಾನಿಸ್ತಾನದ ಫೈಝಾಬಾದ್ನಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಒಂದು ವಾರದಲ್ಲಿ ಎರಡನೇ ಬಾರಿಗೆ ದಿಲ್ಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.
ಭೂಕಂಪನವು ಭೂಮಿಯ ಮೇಲ್ಮೈಯಿಂದ 200 ಕಿಮೀ ಆಳದಲ್ಲಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಕಂಪನದ ಅನುಭವವಾಗಿದೆ. ಯಾವುದೇ ಗಾಯ ಅಥವಾ ಹಾನಿಯ ವರದಿಯಾಗಿಲ್ಲ.
ಇದಕ್ಕೂ ಮೊದಲು, ರವಿವಾರ ಮುಂಜಾನೆ ದಿಲ್ಲಿ-ಎನ್ಸಿಆರ್ನಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. NCS ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ.
Next Story