ಕಾರ್ಕಳ: ಬಾವಿಗೆ ಬಿದ್ದು ಮಹಿಳೆ ಸಾವು
ಕಾರ್ಕಳ: ಕೃಷಿ ಗದ್ದೆಗೆ ನೀರು ಹಾಯಿಸಲು ಮನೆಯ ಮುಂದಿನ ಪಂಪ್‌ಶೆಡ್ ಸ್ವಿಚ್ ಹಾಕಲು ಹೋದ ಮಹಿಳೆ ಆಕಸ್ಮಿಕವಾಗಿ ಅಲ್ಲೇ ಸಮೀಪದ ಅವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ಬೋಳ ಎಂಬಲ್ಲಿ ಜ.5 ರಂದು ನಡೆದಿದೆ.
ಬೋಳ ಕೋಡಿ ಪಾಲಿಂಗೇರಿ ಪರಾರಿ ಮನೆ ನಿವಾಸಿ ಲೀಲಾವತಿ ಶೆಡ್ತಿ(75) ಮೃತರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





