ಇರಾಕ್: ‘ಅಸಭ್ಯ ಡ್ರೆಸ್’ ಧರಿಸಿದ್ದಕ್ಕೆ ಯುವತಿಯ ಮೇಲೆ ಹಲ್ಲೆ

ಬಗ್ದಾದ್, ಜ.5: ಇರಾಕ್ನಲ್ಲಿ ನಡೆದ ಮೋಟಾರ್ ಬೈಕ್ ರೇಸ್ ಸ್ಪರ್ಧೆಯಲ್ಲಿ ‘ಅಸಭ್ಯವಾಗಿ ಬಟ್ಟೆ ಧರಿಸಿ ಸ್ಪರ್ಧಿಗಳನ್ನು ವಿಚಲಿತಗೊಳಿಸಿದ’ ಕಾರಣಕ್ಕೆ ಜನರ ಗುಂಪೊಂದು 17 ವರ್ಷದ ಯುವತಿಯನ್ನು ಬೆನ್ನಟ್ಟಿ ಥಳಿಸಿದ ಪ್ರಕರಣ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇರಾಕ್ನ ಕುರ್ದಿಸ್ತಾನ್ ವಲಯದಲ್ಲಿ ಡಿಸೆಂಬರ್ 30ರಂದು ಈ ಘಟನೆ ನಡೆದಿರುವುದಾಗಿ ‘ದಿ ಡೈಲಿ ಮೈಲ್’ ವರದಿ ಮಾಡಿದೆ. ಕಾರಿಗೆ ಒರಗಿ ನಿಂತಿದ್ದ ಯುವತಿಯನ್ನು ಒದ್ದು ಅವಾಚ್ಯವಾಗಿ ನಿಂದಿಸಿ, ಥಳಿಸಲಾಗಿದೆ. ಆಕೆಯ ಜತೆಗಿದ್ದ ಯುವಕ ಬೈಕ್ನಲ್ಲಿ ಕುಳ್ಳಿರಿಸಿ ಆಕೆಯನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆಗ ಆತನ ಮೇಲೆಯೂ ಹಲ್ಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.ಪ್ರಕರಣಕ್ಕೆ ಸಂಬಂಧಿಸಿ 16 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
Next Story