40 ವರ್ಷದ ಶಿಕ್ಷೆಯ ಬಳಿಕ ಪೆಲಸ್ತೀನ್ ವ್ಯಕ್ತಿಯ ಬಿಡುಗಡೆ

ಟೆಲ್ ಅವೀವ್, ಜ.5: ಇಸ್ರೇಲ್ನಲ್ಲಿ 40 ವರ್ಷದ ಜೈಲುಶಿಕ್ಷೆ ಪೂರ್ಣಗೊಳಿಸಿದ ಫೆಲಸ್ತೀನ್ ವ್ಯಕ್ತಿ ಗುರುವಾರ ಬಂಧಮುಕ್ತನಾಗಿದ್ದಾನೆ ಎಂದು ಮೂಲಗಳು ಹೇಳಿವೆ.
ಇಸ್ರೇಲ್ ಆಕ್ರಮಿತ ಗೋಲನ್‌ಹೈಟ್ಸ್ ಪ್ರದೇಶದಲ್ಲಿ 1983ರಲ್ಲಿ ಇಸ್ರೇಲ್ ಯೋಧನನ್ನು ಅಪಹರಿಸಿ ಹತ್ಯೆಗೈದ ಆರೋಪದಲ್ಲಿ ಕರೀಮ್ ಯೂನಿಸ್ ಎಂಬ ಫೆಲಸ್ತೀನ್ ಪ್ರಜೆಗೆ 40 ವರ್ಷದ ಜೈಲುಶಿಕ್ಷೆ ವಿಧಿಸಲಾಗಿತ್ತು. ಗುರುವಾರ ಬಿಡುಗಡೆಗೊಂಡ ಕರೀಮ್ಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ.
ಈ ಮಧ್ಯೆ, ಕರೀಮ್ ಅವರ ಇಸ್ರೇಲ್ ಪೌರತ್ವವನ್ನು ರದ್ದುಗೊಳಿಸುವಂತೆ ಇಸ್ರೇಲ್ನ ಆಂತರಿಕ ಸಚಿವರು ಇಸ್ರೇಲ್ನ ಅಟಾರ್ನಿ ಜನರಲ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇಸ್ರೇಲ್ ಪೌರತ್ವ ಒಂದು ಸೌಕರ್ಯವಾಗಿದೆ. ಇಸ್ರೇಲಿ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ಇಸ್ರೇಲ್ ಗುರುತು ಪತ್ರ, ಮತ್ತೊಂದು ಕೈಯಲ್ಲಿ ಯೋಧನನ್ನು ಹತ್ಯೆ ಮಾಡಲು ಸಾಧ್ಯವಿಲ್ಲ’ ಎಂದವರು ಹೇಳಿದ್ದಾರೆ.
Next Story





