ಉತ್ತರಕನ್ನಡ: ಕಬ್ಬಿನ ಗದ್ದೆಗೆ ಬೆಂಕಿಗೆ ರೈತರಿಗೆ ಅಪಾರ ಹಾನಿ

ಮುಂಡಗೋಡ: ಸುಮಾರು 37 ಎಕರೆ ಪ್ರದೇಶದಲ್ಲಿ ಸರ್ವೇ ನಂಬರ್ 14/3 ರಲ್ಲಿ ವಿವಿಧ ರೈತರು ಬೆಳದಿದ್ದ ಕಬ್ಬಿನ ಗದ್ದೆಗೆ ವಿದ್ಯುತ್ ಅವಘಡದಿಂದ ಭಾಗಶಃ ಬೆಂಕಿಯ ಕೆನ್ನಾಲೆಗಿಗೆ ಆಹುತಿಯಾದ ಘಟನೆ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಎಲ್ಲಾ ಕಬ್ಬಿನ ಬೆಳೆಯನ್ನು ನುಂಗಿಹಾಕಲು ನೋಡಿದ ಬೆಂಕಿಗೆ ಮುಂಡಗೋಡ ಹಾಗೂ ಕಲಘಟಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಬಹುಪಾಲ ಬೆಳೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಡಗೋಡ ಅಗ್ನಿಶಾಮಕ ದಳದ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಸ್.ಮಂಜಣ್ಣ, ಸಿಬ್ಬಂದಿಗಳಾದ ಬಸವರಾಜ ನಾನಾಪೂರ, ಸೋಮಶೇಖರ ಜೀವಣ್ಣನವರ, ಹರೀಶ ಪಟಗಾರ, ಚಂದ್ರಪ್ಪ ಲಮಾಣಿ, ರಾಜೇಶ ಸವಣೂರ, ವಿಷ್ಣು ಗುಲ್ಯಾನವರ ಹಾಗೂ ಕಲಘಟಗಿ ಅಗ್ನಿಶಾಮಕದಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story





