ಫಿಲಿಪ್ಪೀನ್ಸ್: ಭಾರತದ ಕಬಡ್ಡಿ ಕೋಚ್ ಹತ್ಯೆ

ಮನಿಲಾ, ಜ.5: ಭಾರತದ ಕಬಡಿ ಕೋಚ್ ಗುರ್ಪ್ರೀತ್ ಸಿಂಗ್ ಗಿಂಡ್ರು(43ವರ್ಷ)ರನ್ನು ಫಿಲಿಪ್ಪೀನ್ಸ್ನ ರಾಜಧಾನಿ ಮನಿಲಾದಲ್ಲಿ ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮನಿಲಾ ಪೊಲೀಸರು ಹೇಳಿದ್ದಾರೆ.
ಕಳೆದ 4 ವರ್ಷಗಳಿಂದ ಫಿಲಿಪ್ಪೀನ್ಸ್ನಲ್ಲಿ ನೆಲೆಸಿರುವ ಗುರ್ಪ್ರೀತ್ ಸಿಂಗ್ ಕಬಡ್ಡಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ್ದ ಸಿಂಗ್ರನ್ನು ಮನೆಗೆ ನುಗ್ಗಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಂತಕರ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Next Story