ವಿಟ್ಲ | ನೀರಕಣಿಯಲ್ಲಿ ಆಟೋ ರಿಕ್ಷಾ-ಕಾರು ಢಿಕ್ಕಿ: ಮೂವರಿಗೆ ಗಾಯ

ವಿಟ್ಲ, ಜ.6: ಆಟೋ ರಿಕ್ಷಾ ಹಾಗೂ ಕಾರು ನಡುವೆ ಅಪಘಾತ ಸಂಬಂಧಿಸಿದ ಘಟನೆ ವಿಟ್ಲ – ಸೇರಾಜೆ ರಸ್ತೆಯ ನೀರಕಣಿ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಆಟೋ ಚಾಲಕ ಅನಿಲಕಟ್ಟೆ ವಸಂತ ಪೂಜಾರಿ, ಪ್ರಯಾಣಿಕ ಯುವತಿಯೊಬ್ಬಳ ಸಹಿತ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ನ ವೈದ್ಯೆ ಡಾ.ಗಾಯಂತ್ರಿ ಗೀತಾಪ್ರಕಾಶ್ ಅವರ ಕಾರು ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದೆ. ಬಳಿಕ ಎರಡೂ ವಾಹನಗಳು ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದಿವೆ. ಇದರಿಂದ ಎರಡೂ ವಾಹನಗಳು ಜಖಂಗೊಂಡಿವೆ.
Next Story





