ಸ್ವರ್ಗದಲ್ಲಿ ಖಾತೆ ತೆರೆದ ಉದ್ಯಮಿ ಕೊಲಾಸೊ: ಡಾ.ಆರತಿ ಕೃಷ್ಣ

ರೊನಾಲ್ಡ್ ಕೊಲಾಸೋ ಅವರು ತಮ್ಮ ಮಾನವೀಯ ಸ್ಪಂದನೆ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸ್ವರ್ಗದಲ್ಲಿ ತಮ್ಮ ಖಾತೆ ತೆರೆದಿರುವ ಉದ್ಯಮಿಯಾಗಿದ್ದಾರೆ ಎಂದು ಮಾಜಿ ರಾಜತಾಂತ್ರಿಕ ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಫೋರಂನ ಪ್ರಪ್ರಥಮ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ನುಡಿದರು.
ಕೊಲಾಸೊ ಅವರು ಹೆಮ್ಮೆಯ ಕನ್ನಡಿಗ ಆಗಿರುವಂತೆ ಹೆಮ್ಮೆಯ ಭಾರತೀಯ ಆಗಿದ್ದಾರೆ. ಇವರ ಸಾಮಾಜಿಕ ಕಾರ್ಯಗಳು ಮತ್ತು ಸಾಧನೆಗಳು, ಕೊಡುಗೆಗಳು ಅರಬ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಚ್ಚೊತ್ತಿವೆ ಎಂದರು.
ಕೊಲಾಸೊ ಅವರ ಕಾರಣದಿಂದ ಸಾವಿರಾರು ಅನಿವಾಸಿ ಭಾರತೀಯರು ಹೆಮ್ಮೆ ಪಡುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Next Story