Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉತ್ತರಕನ್ನಡ: ನಾಲ್ಕು ಬಿಸಿಯೂಟದ ಅಡುಗೆ...

ಉತ್ತರಕನ್ನಡ: ನಾಲ್ಕು ಬಿಸಿಯೂಟದ ಅಡುಗೆ ಸಿಬ್ಬಂದಿ ವಜಾ ಮಾಡಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸಭೆಯಲ್ಲಿ ನಿರ್ಣಯ

6 Jan 2023 10:59 PM IST
share
ಉತ್ತರಕನ್ನಡ:  ನಾಲ್ಕು ಬಿಸಿಯೂಟದ ಅಡುಗೆ ಸಿಬ್ಬಂದಿ ವಜಾ ಮಾಡಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸಭೆಯಲ್ಲಿ ನಿರ್ಣಯ

ಮುಂಡಗೋಡ:  ಬಿಸಿಯೂಟದ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಅಡುಗೆ ಸಿಬ್ಬಂದಿಗಳನ್ನು ವಜಾ ಮಾಡಿ ಹೊಸ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಶುಕ್ರವಾರ ಕರೆದ ಸಭೆಯಲ್ಲಿ ಗಣ್ಯಮಾನ್ಯರ, ಪಾಲಕರ ಹಾಗೂ ಶಿಕ್ಷಕರ ಮತ್ತು ಎಸ್.ಡಿ.ಎಮ್.ಸಿ  ಸರ್ವ ಸದಸ್ಯರ, ಊರಿನ ನಾಗರಿಕರ  ಸಮ್ಮುಖದಲ್ಲಿ ನಿರ್ಣಯ ಕೈಗೊಂಡ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಚಿಗಳ್ಳಿ ಗ್ರಾಮದ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳು ಸರಿಯಾದ ವೇಳೆಗೆ ಅಡುಗೆ ಮಾಡದಿರುವುದು, ಅಡುಗೆಯಲ್ಲಿ ಹುಳ ಬರುವುದು, ಮಕ್ಕಳಿಗೆ ಸರಿಯಾದ ವೇಳೆಗೆ ಹಾಲು ಕೊಡದೆ ಇಲಾಖೆಯ ಆದೇಶ ಪಾಲನೆ ಮಾಡುತ್ತಿರಲಿಲ್ಲ. ಅಡುಗೆ ಸಿಬ್ಬಂದಿಗಳ ನಡುವೆಯೇ  ಜಗಳ ನಡೆಯುತ್ತಿದ್ದವು. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿರುವುದಾಗಿ ಹಲವಾರು ಬಾರಿ ಶಿಕ್ಷಕರ ಬಳಿ ಹಾಗೂ ಗ್ರಾಮ ಸಭೆಯಲ್ಲೂ ವಿದ್ಯಾರ್ಥಿಗಳು ದೂರನ್ನು ನೀಡಿದ್ದರು. 

ಈ ಹಿನ್ನಲೆಯಲ್ಲಿ ಹಲವಾರು ಬಾರಿ ಸರಿಯಾಗಿ ಕೆಲಸ ನಿರ್ವಹಿಸುವಂತೆ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಕರು ಹಾಗೂ ಎಸ್‍ಡಿಎಮ್‍ಸಿ ಸದಸ್ಯರು ಸೂಚಿಸಿದ್ದರು. ಈ  ಕುರಿತು ನಾಲ್ಕೈದು ಬಾರಿ ಸಭೆ ಕರೆದು ತಿಳಿಸಲಾಗಿತು. ಒಂದು ಸಭೆಯಲ್ಲಿ  ಕೇತ್ರ ಶಿಕ್ಷಣಾಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ಮಾಜಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ಎಸ್‍ಡಿಎಮ್‍ಸಿ ಅಧ್ಯಕ್ಷ ಫಕ್ಕೀರಸ್ವಾಮಿ ಹುಲಿಯರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಜಿ.ಎನ್. ನಾಯ್ಕ, ಎಸ್‍ಡಿಎಮ್‍ಸಿ ಸದಸ್ಯರು ಹಾಗೂ ಪಾಲಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿತ್ತು.

ಶುಕ್ರವಾರ ನಡೆದ ಸಭೆಯಲ್ಲಿ ಒಬ್ಬ ಅಡುಗೆ ಸಿಬ್ಬಂದಿ ತನಗೆ  ಮೂರು ಅಡುಗೆ ಸಿಬ್ಬಂದಿಗಳು ಸಹಕಾರ ನೀಡುವುದಿಲ್ಲ ತಾವು ಕೆಲಸ ಮಾಡಲು ತಯಾರಿಲ್ಲ ಎಂದು ಹೇಳಿದ್ದರಿಂದ  ಈ ಕುರಿತು ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡು ಹೋಗಿ ಇದ್ದರೆ ನಾಲ್ಕು ಜನ ಇರಬೇಕು  ಇಲ್ಲದ್ದಿದರೆ ನಾಲ್ಕು ಜನರು ಕೆಲಸದಿಂದ ವಜಾ ಆಗಬೇಕು ಎಂದರು ಆದರೂ ಒಬ್ಬ ಸಿಬ್ಬಂದಿ ಕೆಲಸಮಾಡಲು ಒಪ್ಪಿಕೊಳ್ಳಲೇ ಇಲ್ಲ ಇದರಿಂದ ಗಣ್ಯಮಾನ್ಯರು,  ಎಸ್‍ಡಿಎಮ್‍ಸಿ ಅಧ್ಯಕ್ಷರು ಸರ್ವದಸ್ಯರು,  ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು, ಊರಿನ ಹಿರಿಯರು ನಾಲ್ಕು ಜನ ಅಡುಗೆ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿ ಹೊಸ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಭೆಯಲ್ಲಿ  ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಗಣ್ಯರಾದ ಜಿ.ಪ ಮಾಜಿ ಉಪಾಧ್ಯಕ್ಷ ಎಲ್.ಟಿ.ಪಾಟೀಲ, ಪಿ.ಎಸ್.ಸಂಗೂರಮಠ, ಗ್ರಾ.ಪಂ ಅಧ್ಯಕ್ಷ ಭಾರತಿ ನಿಂಬಾಯಿ, ಉಪಾಧ್ಯಕ್ಷೆ ಹುಲಿಗೆವ್ವಾ ಶಿರಗೇರಿ, ಪಿಡಿಒ ಶಿವಾಜಿ ವಾಸಂಬಿ, ಗ್ರಾ.ಪಂ ಸದಸ್ಯ ಪರುಷರಾಮ ಟಿಕೋಜಿ, ಊರಿನ ಹಿರಿಯರಾದ ರಾಜಶೇಖರ ಹಿರೇಮಠ, ಬಾಬಣ್ಣ ಲಾಡ್‍ನವರ, ಎಸ್‍ಡಿಎಂಸಿ ಅಧ್ಯಕ್ಷ ಫಕ್ಕಿರಸ್ವಾಮಿ ಹುಲಿಯಾರ, ಉಪಾಧ್ಯಕ್ಷ ಮಹಾಬಲೇಶ್ವರ ಪಾಟೀಲ ಸೇರಿದಂತೆ ಸರ್ವಸದಸ್ಯರು, ವಿಷ್ಣು ಅಂತೋಜಿ, ಮಾಂತೇಶ ವಾಲ್ಮಿಕಿ, ಕಲ್ಮೇಶ ಕಿವುಡನವರ,  ಹಾಗೂ ಮುಖ್ಯ ಶಿಕ್ಷಕ ದಾಸಪ್ಪ ಎ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಹೇಳಿಕೆ: ಕಳೆದ ಸುಮಾರು ಒಂದು ತಿಂಗಳಿಂದ ಅಡುಗೆ ಸಿಬ್ಬಂದಿಗಳು ಕೆಲಸಕ್ಕೆ ಬರದೇ ಇರುವುದರಿಂದ ಮಕ್ಕಳಿಗೆ ತೊಂದರೆ ಯಾಗಬಾರದು ಹಾಗೂ ಸರಕಾರದ ಬಿಸಿಯೂಟದ ಯೋಜನೆ ಸರಿಯಾಗಿ ಕಾರ್ಯಗತವಾಗಬೇಕೆಂದು ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ಶಿಕ್ಷಕರು ಕೆಲವುದಿನ ಅಡುಗೆ ಮಾಡಿದ್ದೇವೆ. ನಂತರ ಇತರೆ ಅಡುಗೆ ಮಾಡುವರ ರಿಗೆ ಕೂಲಿಕೊಟ್ಟು ಅಡುಗೆ ಮಾಡಿಸಿದ್ದೇವೆ ಕೆಲವು ದಿನ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಯವರು ಸಹಕಾರ ಪಡೆದು ಅಡುಗೆ ಮಾಡಿ ಸರಕಾರದ ಯೋಜನೆ ನಿಲ್ಲದಂತೆ ಮಾಡಿದ್ದೇವೆ. ನಮಗೆ ಅತಿ ಬೇಗನೆ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು. 

share
Next Story
X