ದಾಖಲೆ ಮಟ್ಟಕ್ಕೆ ಹೆಚ್ಚಳವಾದ ತಲುಪಿದ ಜಾಗತಿಕ ಆಹಾರ ದರ

ನ್ಯೂಯಾರ್ಕ್, ಜ.6: ಡಿಸೆಂಬರ್ ತಿಂಗಳಲ್ಲಿ ಇಳಿಕೆ ದಾಖಲಿಸಿದ್ದರೂ, 2022ರಲ್ಲಿ ಜಾಗತಿಕ ಆಹಾರ ದರ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ 14% ಹೆಚ್ಚಳ ದಾಖಲಿಸಿದೆ ಎಂದು ವಿಶ್ವಸಂಸ್ಥೆ ಆಹಾರ ಏಜೆನ್ಸಿ ಶುಕ್ರವಾರ ಹೇಳಿದೆ. ಜಾಗತಿಕವಾಗಿ ಅತೀ ಹೆಚ್ಚು ವ್ಯಾಪಾರವಾಗುವ ಆಹಾರ ಸರಕುಗಳ ಅಂತರಾಷ್ಟ್ರೀಯ ಬೆಲೆಯ ಮೇಲೆ ನಿಗಾ ವಹಿಸುವ ‘ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ) ಪ್ರಕಾರ, 2022ರ ವರ್ಷದಲ್ಲಿ ಆಹಾರ ವಸ್ತುಗಳ ಬೆಂಚ್ಮಾರ್ಕ್ ಸೂಚ್ಯಂಕ ಸರಾಸರಿ 143.7 ಅಂಕದಲ್ಲಿತ್ತು.
2021ಕ್ಕೆ ಹೋಲಿಸಿದರೆ ಇದು 18 ಅಂಕ ಅಥವಾ 14.3%ದಷ್ಟು ಏರಿಕೆಯಾಗಿದೆ ಮತ್ತು 1990ರ ಬಳಿಕದ ಅತ್ಯಧಿಕ ಪ್ರಮಾಣವಾಗಿದೆ.
ಡಿಸೆಂಬರ್ನಲ್ಲಿ ಸೂಚ್ಯಾಂಕದಲ್ಲಿ ಕುಸಿತ ದಾಖಲಾಗಲು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ತೀವ್ರ ಇಳಿಕೆಯಾಗಿರುವುದು ಮುಖ್ಯ ಕಾರಣವಾಗಿದೆ. ಜತೆಗೆ ಧಾನ್ಯ ಮತ್ತು ಮಾಂಸದ ಬೆಲೆಯಲ್ಲಿ ಇಳಿಕೆಯಾಗಿದೆ.
ಸಕ್ಕರೆ ಮತ್ತು ಡೈರಿ ಉತ್ಪನ್ನಗಳ ಬೆಲೆ ತುಸು ಹೆಚ್ಚಿದೆ. 2022ರಲ್ಲಿ ಆಹಾರ ಆಮದು ವೆಚ್ಚ ಏರಿಕೆಯಾಗಿರುವುದರಿಂದ ಅತೀ ಬಡದೇಶಗಳು ಆಹಾರ ಪದಾರ್ಥ ಆಮದು ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆಗೆ ಸಿಲುಕಿವೆ ಎಂದು ಎಫ್ಎಒ ವರದಿ ಮಾಡಿದೆ.