ನೇಪಾಳ: ಬಸ್ಸು ಅಪಘಾತ 6 ಮಹಿಳೆಯರು ಮೃತ್ಯು; 18 ಮಂದಿಗೆ ಗಾಯ

ಕಠ್ಮಂಡು, ಜ.6: ಪಶ್ಚಿಮ ನೇಪಾಳದ ಪಾಲ್ಪ ಜಿಲ್ಲೆಯ ಸಲ್ಜಿಹಂಡಿ-ಧೊರಪಟಾನ್ ರಸ್ತೆಯಲ್ಲಿ ಸಂಭವಿಸಿದ ಬಸ್ಸು ಅಪಘಾತದಲ್ಲಿ ಕನಿಷ್ಟ 6 ಮಹಿಳೆಯರು ಮೃತಪಟ್ಟಿದ್ದು ಇತರ 18 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ಸು ರಸ್ತೆ ಪಕ್ಕದ ಬಂಡೆಗೆ ಬಡಿದು 60 ಅಡಿಗಳಷ್ಟು ಕೆಳಗಿನ ಪ್ರಪಾತಕ್ಕೆ ಬಿದ್ದಿದ್ದು ಬಸ್ಸಿನಡಿ ಬಿದ್ದು 6 ಮಹಿಳೆಯರು ಮೃತಪಟ್ಟಿದ್ದಾರೆ. ಕೆಟ್ಟ ಹವಾಮಾನದ ಕಾರಣ ಚಾಲಕ ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡದವರು 18 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
Next Story





