ಮೆಕ್ಸಿಕೋ: ಮಾದಕ ವಸ್ತು ಜಾಲದ ಮುಖಂಡನ ಬಂಧನ ಸಂದರ್ಭ ಹಿಂಸಾಚಾರ; ಕನಿಷ್ಟ 29 ಮಂದಿ ಮೃತ್ಯು

ಮೆಕ್ಸಿಕೋ ಸಿಟಿ, ಜ.6: ಮೆಕ್ಸಿಕೋದ ಮಾದಕ ವಸ್ತು ಮಾರಾಟ ಜಾಲದ ಮುಖಂಡ ಒವಿಡಿಯೊ ಗುಝ್ಮಿನ್ನನ್ನು ಬಂಧಿಸುವ ಸಂದರ್ಭ ಆತನ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ 10 ಭದ್ರತಾ ಸಿಬಂದಿಯ ಸಹಿತ ಕನಿಷ್ಟ 29 ಮಂದಿ ಮೃತಪಟ್ಟಿರುವುದಾಗಿ ಮೆಕ್ಸಿಕೋದ ರಕ್ಷಣಾ ಸಚಿವ ಲೂಯಿಸ್ ಕ್ರೆಸೆಂಸಿಯೊ ಸ್ಯಾಂಡೋವಲ್ ಶುಕ್ರವಾರ ಹೇಳಿದ್ದಾರೆ.
ಬಂಧನದಲ್ಲಿರುವ ಮಾದಕವಸ್ತು ಮಾರಾಟ ಜಾಲದ ಕಿಂಗ್ಪಿನ್ ಜಾಖ್ವಿನ್ ಎಲ್ ಚಾಪೊ ಗಝ್ಮನ್ನ ಪುತ್ರ ಒವಿಡಿಯೊನನ್ನು ಬಂಧಿಸಲು ತೆರಳಿದ್ದ ಭದ್ರತಾ ಸಿಬಂದಿಯನ್ನು ಗಝ್ಮನ್ನ ಬೆಂಬಲಿಗರು ತಡೆದು ಘರ್ಷಣೆಗೆ ಇಳಿದರು. ಘರ್ಷಣೆ, ಹಿಂಸಾಚಾರದಲ್ಲಿ 10 ಭದ್ರತಾ ಸಿಬಂದಿ, ಮಾದಕ ವಸ್ತು ಜಾಲದ 19 ಮಂದಿ ಸಹಿತ 29 ಮಂದಿ ಮೃತರಾಗಿದ್ದಾರೆ.
ಒವಿಡಿಯೊ ಹಾಗೂ ಮಾದಕ ವಸ್ತು ಮಾರಾಟ ಜಾಲದ ಇತರ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಮೆಕ್ಸಿಕೋದ ಭದ್ರತಾ ಪಡೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story