ಮಂಗಳಪದವು : ರಿಕ್ಷಾ ನಿಲ್ದಾಣ ಉದ್ಘಾಟನೆ

ವಿಟ್ಲ: ವಿಧಾನಪರಿಷತ್ ಸದಸ್ಯ ಡಾ.ಕೆ.ಗೋವಿಂದ ಭಟ್ ಅವರ 2.5 ಲಕ್ಷ ರೂ. ಅನುದಾನದಲ್ಲಿ ವೀರಕಂಬ ಗ್ರಾಮದ ಮಂಗಳಪದವಿನಲ್ಲಿ ನಿರ್ಮಿಸಿದ ಆಟೋ ರಿಕ್ಷಾ ನಿಲ್ದಾಣದ ಉದ್ಘಾಟನೆ ಸಮಾರಂಭ ಶುಕ್ರವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ರಿಕ್ಷಾ ನಿಲ್ದಾಣ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ ನೀರು, ರಸ್ತೆಗೆ ಭಾರೀ ಅನುದಾನ ಒದಗಿಸಲಾಗಿದೆ. ಸಿರಿಚಂದನವನ ವೀರಕಂಬದಲ್ಲಿ ಮಾಡಲಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಅವಧಿಯಲ್ಲಾಗಿದೆ. ಧರ್ಮಬೇಧ ಮಾಡದೇ ದೇಗುಲಗಳಿಗೆ ಮಸೀದಿಗಳಿಗೆ ಅನುದಾನ ಒದಗಿಸಲಾಗಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಪ.ಪಂ.ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಕಪ್ಪ ಗೌಡ, ಎಂ.ಕೆ.ಮೂಸಾ, ಅಬ್ದುಲ್ ಖಾದರ್, ಜಿಲ್ಲಾ ಯುವ ಕಾಂಗ್ರೆಸ್ ಗಿರೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಗುತ್ತಿಗೆದಾರ ನಾಗರಾಜ ಶೆಟ್ಟಿ ಮತ್ತು ಪುರಂದರ ಅಂಚನ್ ಅವರನ್ನು ಗೌರವಿಸಲಾಯಿತು. ಮಂಗಳಪದವು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೊಬ್ಬೆಕೇರಿ, ಫೆಲಿಕ್ಸ್ ಪಾಯಸ್, ವಸಂತ ಪೂಜಾರಿ, ನೋಣಯ್ಯ ಪೂಜಾರಿ, ಅಶೋಕ್ ಪೂಜಾರಿ ಎನ್.ಎಸ್.ಡಿ., ಇಸ್ಮಾಯಿಲ್ ಮಂಗಳಪದವು, ಅದ್ರಾಮ ಮಂಗಳಪದವು, ಖಾದರ್ ನೆಲ್ಲಿಗುಡ್ಡೆ, ಆನಂದ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ವೀರಕಂಬ ಗ್ರಾ.ಪಂ.ಸದಸ್ಯ ರಘು ಪೂಜಾರಿ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಮೌನೇಶ್ ಆಶಯಗೀತೆ ಹಾಡಿದರು.







