Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘‘ಭೇಷಕ್ ತಮಾಷಾ ಟೈಗರ್ ನಿಶಾನಾ ಟಿಪ್ಪು...

‘‘ಭೇಷಕ್ ತಮಾಷಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಬಿರುದಾಯ್ತು’’

ಜನವರಿ 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ‘ಧೀರ ಟಿಪ್ಪುವಿನ ಲಾವಣಿಗಳು’ ಪುಸ್ತಕ ಬಿಡುಗಡೆಯಾಗಲಿದೆ.

ವಸಂತ್ ಎನ್.ಕೆ.ವಸಂತ್ ಎನ್.ಕೆ.7 Jan 2023 12:13 PM IST
share
‘‘ಭೇಷಕ್ ತಮಾಷಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಬಿರುದಾಯ್ತು’’
ಜನವರಿ 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ‘ಧೀರ ಟಿಪ್ಪುವಿನ ಲಾವಣಿಗಳು’ ಪುಸ್ತಕ ಬಿಡುಗಡೆಯಾಗಲಿದೆ.

ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು

ಮಸಲತ್ ಮಾಡಿದ ಮೀರಸಾದಕನಿಗೆ ದೇಶ ದ್ರೋಹಿ ಎಂಬ್ಹೆಸರಾಯ್ತು ॥

ಹರಾಮಕೋರರ ಕರಾಮತ್ ಅರಿತನು ಟೀಪುಸುಲ್ತಾನನು ನಿಮಿಷದಲಿ

ಅರೇ ಹಮಾರ ನಮಕ್ ಹರಾಮ ಕರೆಸೋ ತಾನಂದ ಮನಸಿನಲಿ ॥

ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ

ಫಿರಂಗಿ ಸೋಲ್ಜರ ತರಂಗ ಮಧ್ಯದಿ ಸುರಂಗ ಬಿಟ್ಟನು ತ್ವರಿತದಲಿ ॥

ಪರಂಪರೆಯಿಂಪರ ವಿರೋಧಿ ಪೋಜನು ಕುರಿಗಳಂದದಿ ಖಡ್ಗದಲಿ

ಸರಾಸರಿಯಿಲ್ ಬರೆಯಲು ಸಿಗದು ತರಿದನೆಷ್ಟೋ ಶಿರವನಲಿ॥

ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ

ಫರಂಗಿ ಫೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ ॥

‘‘ಭೇಷಕ್ ತಮಾಷಾ ಟೈಗರ್ ನಿಶಾನಾ ಟಿಪ್ಪುಸುಲ್ತಾನನ ಬಿರುದಾಯ್ತು’’ ಎಂದು ಆರಂಭವಾಗುವ ಟಿಪ್ಪುಸುಲ್ತಾನನ ಕೊನೆಯನ್ನು ವಿಷಾದದಿಂದ ಬಣ್ಣಿಸುವ ‘ಮೈಸೂರು ಹುಲಿ ಟಿಪ್ಪುಸುಲ್ತಾನನ ಲಾವಣಿ’ಯ ಕೆಲವು ಸಾಲುಗಳಿವು. ಈ ಲಾವಣಿ ಇರುವ ಪುಸ್ತಕ ‘ಧೀರ ಟಿಪ್ಪುವಿನ ಲಾವಣಿಗಳು’. ಟಿಪ್ಪು ಸುಲ್ತಾನನ ಕುರಿತು ವ್ಯಾಪಕವಾಗಿ ಜನಜನಿತವಾಗಿದ್ದ ‘ಲಾವಣಿ’ಗಳ ಸಂಗ್ರಹವಿದು. ಖ್ಯಾತ ಸಾಹಿತಿ, ವಿದ್ವಾಂಸ ಲಿಂಗದೇವರು ಹಳೆಮನೆ ಅವರು ಸಂಪಾದಿಸಿ 2003ರಲ್ಲಿ ಪ್ರಕಟಿಸಿದ ಕೃತಿಯಿದು. ಈಗ ಕ್ರಿಯಾ ಮಾಧ್ಯಮ ಎರಡನೆಯ ಆವೃತ್ತಿಯನ್ನು ಪ್ರಕಟಿಸುತ್ತಿದೆ. ಈ ಪುಸ್ತಕ ಜನವರಿ 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ‘ಕನ್ನಡ ನಾಡು ನುಡಿ: ಟಿಪ್ಪುಕೊಡುಗೆಗಳು’ ಗೋಷ್ಠಿಯಲ್ಲಿ ಬಿಡುಗಡೆಯಾಗಲಿದೆ.

ಟಿಪ್ಪುಸುಲ್ತಾನನ ಕುರಿತ ಆರು ಲಾವಣಿಗಳನ್ನು ಸಂಗ್ರಹಿಸಿದ್ದಲ್ಲದೆ ಲಿಂಗದೇವರು ಈ ಲಾವಣಿಗಳ ಚರಿತ್ರೆ, ಮಹತ್ವ ಮತ್ತು ಟಿಪ್ಪುಸುಲ್ತಾನನ ಸುತ್ತ ವಿವಾದಗಳ ಕುರಿತು ದೀರ್ಘವಾದ ಉಪಯುಕ್ತವಾದ ಪ್ರಸ್ತಾವನೆ ಬರೆದಿದ್ದಾರೆ. ಇದಲ್ಲದೆ ಖ್ಯಾತ ಸಾಂಸ್ಕೃತಿಕ ಚಿಂತಕ, ಜಾನಪದ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಈ ಆವೃತ್ತಿಗಾಗಿಯೇ ಮುನ್ನುಡಿಯೊಂದನ್ನು ಬರೆದಿದ್ದಾರೆ. ‘‘ಮೌಖಿಕ ಇತಿಹಾಸ, ಲಾವಣಿಗಳು ಮತ್ತು ಟಿಪ್ಪುಸುಲ್ತಾನ್’’ಎಂಬ ಶೀರ್ಷಿಕೆಯಲ್ಲಿ ಅವರು ಬರೆದ ದೀರ್ಘ ಮುನ್ನುಡಿ ಈ ಲಾವಣಿಗಳನ್ನು ಅರಿಯಲು ಸಹಾಯಕವಾಗುವುದಲ್ಲದೆ ಟಿಪ್ಪುಸುಲ್ತಾನನ ಕುರಿತ ಚರ್ಚೆಯನ್ನು ನಡೆಸಬೇಕಾದ ಸರಿಯಾದ ಕಣ್ಣೋಟವನ್ನು ಮುಂದಿಡುತ್ತದೆ. ಲಿಂಗದೇವರು ಪ್ರಸ್ತಾವನೆಯಲ್ಲಿ ಬರೆದಂತೆ ಈ ಕೃತಿಯ ಮೊದಲ ಆವೃತ್ತಿಯ ಪ್ರಕಟಣೆಗೆನೇ ಒತ್ತಡ ಹಾಕಿದ ಪ್ರೊ.ರಹಮತ್ ತರೀಕೆರೆ ಅವರು ವಿಶಿಷ್ಟ ಒಳನೋಟಗಳಿರುವ ಬೆನ್ನುಡಿಯನ್ನು ಬರೆದಿದ್ದಾರೆ.

ಟಿಪ್ಪುಲಾವಣಿಗಳ ಕುರಿತು ಲಿಂಗದೇವರು ಹಳೆಮನೆ, ಪುರುಷೋತ್ತಮ ಬಿಳಿಮಲೆ, ರಹಮತ್ ತರೀಕೆರೆ ಅವರ ವಿದ್ವತ್ಪೂರ್ಣ ಬರಹಗಳ ಆಯ್ದ ಭಾಗಗಳು ಇಲ್ಲಿವೆ:

‘‘ಜನಪದ ನಿರೂಪಣೆ ಟಿಪ್ಪುವನ್ನು ಕಂಡ ರೀತಿ ಹೇಗಿದೆ ಎಂಬುದು ಸಹಜವಾಗಿಯೇ ಕುತೂಹಲಕಾರಿಯಾದುದು...ಟಿಪ್ಪುವಿನ ಇತಿಹಾಸವನ್ನು ಗಮನಿಸುವಾಗ ಈ ಲಾವಣಿಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಆಶ್ಚರ್ಯವೆಂದರೆ, ಲಿಖಿತ ಇತಿಹಾಸದಲ್ಲಿ ಖಳನಾಯಕನೆಂದು ಚಿತ್ರಿತವಾಗಿರುವ ಟಿಪ್ಪು ಇಲ್ಲಿಯವರೆಗೆ ಲಭ್ಯವಿರುವ ಜನಪದ ಸಾಹಿತ್ಯದಲ್ಲಿ ಹಾಗೂ ಕಂಪೆನಿ ನಾಟಕಗಳಲ್ಲಿ ಜನಾನುರಾಗಿಯೆಂದೂ ರಾಷ್ಟ್ರವೀರನೆಂದೂ ವಿಜೃಂಭಿಸಿರುವುದು... ಇಲ್ಲಿನ ಲಾವಣಿಗಳನ್ನು ಗಮನಿಸಿದಾಗ ತಟ್ಟನೆ ನಮಗೆ ಗೋಚರಿಸುವ ಅಂಶವೆಂದರೆ, ಯಾವ ಲಾವಣಿಯೂ ಟಿಪ್ಪುವನ್ನು ಮತಾಂಧ, ಹಿಂದೂ ದ್ವೇಷಿ ಎಂದು ವರ್ಣಿಸದೇ ಇರುವುದು.’’

- ಲಿಂಗದೇವರು ಹಳೆಮನೆ

‘‘ಸಾಮಾನ್ಯವಾಗಿ ಜನರಿಗೆ ಹತ್ತಿರವಾಗಿ ಬದುಕಿದ್ದವರ ಕುರಿತು ಮಾತ್ರ ಜನಪದ ಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಇತಿಹಾಸದ ಪ್ರಮುಖ ಘಟನೆಗಳಲ್ಲಿ ಭಾಗಿಯಾದವರು, ಅಥವಾ ಅದಕ್ಕೆ ಸಾಕ್ಷಿಯಾದವರು, ತಮ್ಮ ನೆನಪುಗಳನ್ನು ಮೌಖಿಕ ರೂಪದಲ್ಲಿ ದಾಖಲಿಸಿಕೊಳ್ಳುತ್ತಾರೆ. ಲಾವಣಿಗಳು ಅಂಥ ಪ್ರಮುಖ ದಾಖಲೆಗಳು. ಅವು ಆ ಕಾಲಘಟ್ಟದಲ್ಲಿ ಬದುಕಿದ್ದ ಜನರ ಮನದಾಳದಲ್ಲಿ ಹುದುಗಿದ್ದ ವೈಯಕ್ತಿಕ ಅನುಭವಗಳನ್ನು ಹಾಡಿನ ಮೂಲಕ ಜನರಿಗೆ ತಿಳಿಸಿಹೇಳುತ್ತವೆ... ಲಾವಣಿ ಬರೆದವನಿಗೆ ಅಥವಾ ಲಾವಣಿ ಹಾಡುವವನಿಗೆ ಲಾವಣಿಯಲ್ಲಿ ಕಂಡರಿಸಲಾದ ನಾಯಕನ ಬಗ್ಗೆ ನೋಡಿ, ಕೇಳಿ, ನೇರವಾಗಿ ಗೊತ್ತಿರುತ್ತದೆ. ಇತಿಹಾಸದ ವ್ಯಕ್ತಿಯೊಬ್ಬ ಜನಸಾಮಾನ್ಯರೊಡನೆ ಸಂಪರ್ಕ ಸಾಧಿಸದೆ ಇದ್ದರೆ ಅವನ ಬಗ್ಗೆ ಲಾವಣಿಗಳು ಹುಟ್ಟುವುದಿಲ್ಲ... ಇಂತಹ ನೆನಪುಗಳನ್ನು ಒರೆಸಿ ಹಾಕುವ ಪ್ರಯತ್ನಗಳು ನಡೆಯುತ್ತಿರುವಾಗ, ಟಿಪ್ಪುವಿನ ಲಾವಣಿಗಳು ಮತ್ತೆ ಪ್ರಕಟವಾಗಿ ಓದುಗರಿಗೆ ದೊರೆಯುತ್ತಿರುವುದು ಸಂತೋಷದ ವಿಚಾರ.’’

- ಪುರುಷೋತ್ತಮ ಬಿಳಿಮಲೆ

‘‘ಇಲ್ಲಿ ಟಿಪ್ಪುವನ್ನು ತಮ್ಮ ಊರುಮನೆಯ ವ್ಯಕ್ತಿ, ಕುಟುಂಬದ ಸದಸ್ಯ ಎಂಬ ಬಾವಣಿಕೆಯಿಂದ ಚರಿತ್ರೆಯನ್ನು ನೋಡುವ ಜನಪದ ಕಥನವಿದೆ. ಇಲ್ಲಿನ ಲಾವಣಿಗಳು ಇಂತಹ ಸಾಮುದಾಯಿಕ ದೃಷ್ಟಿಕೋನದ ನಿರೂಪಣೆಗಳಾಗಿವೆ. ಜನಪದರು ಯಾವಾಗಲೂ ಯುದ್ಧವನ್ನು ಗೆದ್ದ ಸಾಮ್ರಾಟರ ಬಗ್ಗೆ ಕಥಿಸುವುದಿಲ್ಲ. ದೊಡ್ಡ ಶಕ್ತಿಯೊಂದಕ್ಕೆ ಅಂಜದೆ ಮುಖಾಮುಖಿಯಾಗಿ ದುರಂತ ಸಾವನ್ನು ಕಂಡ ಕೆಚ್ಚೆದೆಯವರನ್ನು ಕುರಿತು ಹಾಡುವರು. ಈ ಲಾವಣಿಗಳಲ್ಲಿ ಬಿದ್ದವರ ನೋವಿಗೆ ಮಿಡಿಯುವ ಅಂತಃಕರಣವಿದೆ. ಗತವನ್ನು ವರ್ತಮಾನಕ್ಕೆ ತಂದು ಸಮಕಾಲೀನಗೊಳಿಸುವ ಪ್ರಜ್ಞೆಯೂ ಇದೆ. ಧರ್ಮಾತೀತವಾಗಿ ಬದುಕನ್ನು ನೋಡುವ ಜಾತ್ಯತೀತತೆಯೂ ಇದೆ.’’

- ರಹಮತ್ ತರೀಕೆರೆ

share
ವಸಂತ್ ಎನ್.ಕೆ.
ವಸಂತ್ ಎನ್.ಕೆ.
Next Story
X