ವಿಟ್ಲ: ಸರಣಿ ಅಪಘಾತ; ಹಲವು ವಾಹನಗಳು ಜಖಂ

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕು ವಾಹನಗಳು ಜಖಂಗೊಂಡ ಘಟನೆ ಸಂಭವಿಸಿದೆ.
ವಿಟ್ಲ-ಪುತ್ತೂರು ರಸ್ತೆಯ ಸ್ಪೈಸಿ ಹೊಟೇಲ್ ಮುಂಭಾಗ ಈ ಘಟನೆ ಸಂಭವಿಸಿದೆ. ಘಟನೆಯಿಂದ ಎರಡು ಕಾರು, ಒಂದು ಡಿಯೋ ಮತ್ತು ಬೈಕ್ ಜಖಂಗೊಂಡಿದೆ.
ಮೇಗಿನಪೇಟೆ ಶೋರೂಂ ಕಡೆಯಿಂದ ಬಂದ ಬೈಕ್ ಸ್ಪೈಸಿ ಹೋಟೆಲ್ ಮುಂಭಾಗ ಒಂದು ಕಾರಿಗೆ ಢಿಕ್ಕಿ ಹೊಡೆದು, ಬಳಿಕ ಡೀಯೋ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ನಂತರ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.