ನಾಟೆಕಲ್: ಎಂಡಿಎಂಎ ಸಹಿತ ಆರೋಪಿ ಬಂಧನ
ಕೊಣಾಜೆ: ಮಾದಕದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ಡ್ರಗ್ಸ್ ಸೇರಿದಂತೆ ರೂ.2,06,000 ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಗೇರುಕಟ್ಟೆ ನಿವಾಸಿ ಅಬ್ದುಲ್ಲಾ ಬಿ. ಯಾನೆ ಸದ್ದಾಂ ಬಂಧಿತ ಆರೋಪಿ.
ನಾಟೆಕಲ್ ಸಮೋಈ ವಿಜಯನಗರ ಎಂಬಲ್ಲಿ ಯಮಹ ಎಫ್ ಝೀ ಬೈಕ್ ನಲ್ಲಿ ಬಂದು ಎಂಡಿಎಂಎ ಮಾದಕದ್ರವ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದರು.
ಬೈಕ್ ಮೇಲೆ ಕುಳಿತಿದ್ದವನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಯು ಅಕ್ರಮವಾಗಿ ನಿಷೇಧಿತ 8 ಗ್ರಾಂ ಎಂಡಿಎಂಎ ತಂದು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿಷೇದಿತ ಮಾದಕ ವಸ್ತುವಿನ ಮೌಲ್ಯ ರೂ. 40,000, ಮೊಬೈಲ್ ಗಳು ಹಾಗೂ ಬೈಕ್ ನ ಮೌಲ್ಯ 1,56,000 ಒಟ್ಟು ಸೇರಿ 2,06,000ರೂ ಅಂದಾಜಿಸಲಾಗಿದೆ.
ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿಸಿಪಿ ಆನ್ಶುಕುಮಾರ್, ಡಿಸಿಪಿ ಅಪರಾಧ ಮತ್ತು ಸಂಚಾರ ದಿನೇಶ್ ಕುಮಾರ್ ಹಾಗೂ ಎಸಿಪಿ ದಿನಕರ ಶೆಟ್ಟಿ ರವರ ನಿರ್ದೇಶನದಂತೆ ಇನ್ಸಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪಿಎಸೈ ಶರಣಪ್ಪ ಭಂಡಾರಿ ಹಾಗೂ ಸಿಬ್ಬಂದಿಗಳಾದ ಶಿವಕುಮಾರ್,ಪುರುಷೋತ್ತಮ, ಸುರೇಶ್, ಪ್ರಶಾಂತ ದೀಪಕ್, ಶೈಲೆಂದ್ರ,ಮಂಜಪ್ಪರವರ ತಂಡ ಭಾಗವಹಿಸಿತ್ತು.