ಉಡುಪಿ: ಟಿಪ್ಪರ್ ಕಾಣೆ ; ಪ್ರಕರಣ ದಾಖಲು
ಕೋಟ: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಾಸ್ತಾನ ಟೋಲ್ ಸಮೀಪ ನಿಲ್ಲಿಸಿದ್ದ ಟಿಪ್ಪರ್ ಲಾರಿ ಕಾಣೆಯಾದ ಬಗ್ಗೆ ಇಬ್ಬರು ಆರೋಪಿಗಳ ಮೇಲೆ ಸಂಶಯವಿದೆ ಎಂದು ಕೋಟ ಪೊಲೀಸ್ ಠಾಣೆಗೆ ವ್ಯಕ್ತಿಯೋರ್ವರು ತಡವಾಗಿ ದೂರು ನೀಡಿದ್ದಾರೆ.
ಬ್ರಹ್ಮಾವರ ತಾಲೂಕು ಸಾಸ್ತಾನ ಐರೋಡಿ ನಿವಾಸಿ ಮಹಾಬಲೇಶ್ವರ ಕಾರಂತ ಎನ್ನುವರು ದೂರು ನೀಡಿದ್ದು, ಇವರ ಟಿಪ್ಪರ್ ಲಾರಿಯನ್ನು ಅ.8ರ ರಾತ್ರಿ ಸಾಸ್ತಾನ ಟೋಲ್ ಗೇಟಿನ ಹತ್ತಿರ ನಿಲ್ಲಿಸಿದ್ದು, ಅ.9ರಂದು ಬೆಳಿಗ್ಗೆ ನೋಡಿದಾಗ ನಿಲ್ಲಿಸಿದ ಟಿಪ್ಪರ್ ಲಾರಿ ಸ್ಥಳದಿಂದ ಕಾಣೆಯಾಗಿತ್ತು.
ಈ ಟಿಪ್ಪರ್ ಕಾಣೆಯಾಗುವಲ್ಲಿ ಹೇಮಂತ್ ಮತ್ತು ನವೀನ್ ಎಂಬುವವರ ಮೇಲೆ ಸಂಶಯವಿರುವುದಾಗಿ ಆರೋಪಿಸಿ ಮಹಾಬಲೇಶ್ವರ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story