ಮಂಗಳೂರು: ಅಪರಿಚಿತ ಮೃತದೇಹ ಪತ್ತೆ
ಮಂಗಳೂರು:ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸುಮಾರು 70 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹ ಜ.4ರಂದು ಪತ್ತೆಯಾಗಿದೆ.
ಸುಮಾರು 5.1ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ದಪ್ಪ ಮೂಗು, ಅಗಲವಾದ ಹಣೆ ಹೊಂದಿದ್ದು, ಬಲ ಹಿಮ್ಮಡಿಯಲ್ಲಿ ಹಳೆಯ ಗಾಯವಿದೆ. ಪಿಂಕ್ ಕಲರಿನ ತುಂಬು ತೋಳಿನ ಅಂಗಿ, ಬಳಿ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಕೆಂಪು ಬಣ್ಣದ ಬಿಳಿ ಚುಕ್ಕಿಗಳಿರುವ ಬರ್ಮುಡಾ ಚಡ್ಡಿ ಧರಿಸಿದ್ದಾರೆ. ಮಾಹಿತಿ ದೊರೆತವರು ಮಂಗಳೂರು ರೈಲ್ವೆ ಪೊಲೀಸ್ ಠಾಣೆ (0824-2220559) ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Next Story