ಉಡುಪಿ: ಅಖಿಲ ಭಾರತ ಅಂತರ್ ವಿವಿ ಮಟ್ಟದ ವಾಲಿಬಾಲ್ ಪಂದ್ಯಾಟ; ಮಂಗಳೂರು ವಿವಿ ಸೆಮಿ ಫೈನಲ್‌ಗೆ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜು ಅಂಗಣದಲ್ಲಿ ನಡೆದಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ತಡರಾತ್ರಿ ಮುಗಿದ ಟೂರ್ನಿಯ ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆತಿಥೇಯ ಮಂಗಳೂರು ವಿವಿ ತಂಡ, ತನ್ನ ಎದುರಾಳಿ ಚೆನ್ನೈನ ಮದ್ರಾಸ್ ವಿವಿ ತಂಡವನ್ನು 3-1 ಅಂತರದಿಂದ ಹಿಮ್ಮೆಟ್ಟಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಸಿ ಗುಂಪಿನ ಅಗ್ರಸ್ಥಾನಿಯಾಗಿರುವ ಮಂಗಳೂರು ವಿವಿ, ತನ್ನ ಎದುರಾಳಿ ಮದ್ರಾಸ್ ವಿವಿಯನ್ನು 25-23, 25-22, 22-25, 35-33 ರ ಅಂತರದಿಂದ ಅತ್ಯಂತ ರೋಮಾಂಚಕಾರಿಯಾಗಿ ಸೋಲಿಸಿ ನಾಳೆ ಸೆಮಿಫೈನಲ್‌ನಲ್ಲಿ ಚೆನ್ನೈನ ಮತ್ತೊಂದು ತಂಡವಾದ ಬಲಿಷ್ಠ ಎಸ್‌ಆರ್‌ಎಂ ವಿವಿಯನ್ನು ಎದುರಿಸಿ ಆಡುವ ಅರ್ಹತೆ ಪಡೆದಿದೆ.




Next Story