Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಟ್ರಾಫಿಕ್ ದಟ್ಟಣೆಯ ತೊಂದರೆಗೆ...

ಟ್ರಾಫಿಕ್ ದಟ್ಟಣೆಯ ತೊಂದರೆಗೆ ಕೊನೆಯೆಲ್ಲಿ?

ಆರ್.ಬಿ.ಗುರುಬಸವರಾಜಆರ್.ಬಿ.ಗುರುಬಸವರಾಜ8 Jan 2023 12:10 AM IST
share
ಟ್ರಾಫಿಕ್ ದಟ್ಟಣೆಯ ತೊಂದರೆಗೆ ಕೊನೆಯೆಲ್ಲಿ?

ಭಾರತದ ಹೆಚ್ಚಿನ ನಗರಗಳು ವಿಶೇಷವಾಗಿ ಮೆಟ್ರೋಪಾಲಿಟನ್ ಸಿಟಿಗಳು ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್‌ಗಳ ಹೆಚ್ಚಳದಿಂದ ಪರಿಸರ ಮಾಲಿನ್ಯದ ಕೇಂದ್ರಗಳಾಗಿವೆ. ಇದರಲ್ಲಿ ಸಾರಿಗೆ ಕ್ಷೇತ್ರವು ಪರಿಸರ ಮಾಲಿನ್ಯಕ್ಕೆ ಪ್ರಮುಖ ಪಾಲನ್ನು ಅಂದರೆ ಸುಮಾರು ಶೇ. 70 ಮಾಲಿನ್ಯಕ್ಕೆ ಕಾರಣವಾಗಿದೆ. ಈ ಮಾಲಿನ್ಯಕಾರಕಗಳಲ್ಲಿ ಇಂಗಾಲದ ಡೈ ಆಕ್ಸೈಡ್ ಸಾರಿಗೆ ವಲಯದಿಂದ ಬರುವ ಪ್ರಮುಖ ಮಾಲಿನ್ಯಕಾರಕವಾಗಿದೆ.


ಕ್ಷಿಪ್ರ ನಗರೀಕರಣ ಮತ್ತು ಮೋಟಾರು ವಾಹನಗಳ ಹೆಚ್ಚಳವು ಇತ್ತೀಚಿನ ವರ್ಷಗಳಲ್ಲಿ ಮಾನವ ಜೀವನ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಕೇವಲ ಬೆಂಗಳೂರು ನಗರದಲ್ಲಿ 90 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಇವುಗಳ ಸಂಖ್ಯೆ ಶೀಘ್ರದಲ್ಲೇ 1 ಕೋಟಿ ದಾಟಲಿದೆ. ಟ್ರಾಫಿಕ್‌ನಲ್ಲಿ ಸಿಲುಕಿದ ಬಹುತೇಕ ವಾಹನಗಳ ಇಂಜಿನ್‌ಗಳು ಚಾಲೂ (ಆನ್ ಮೋಡ್) ಸ್ಥಿತಿಯಲ್ಲಿಯೇ ಇರುತ್ತದೆ. ಇದರಿಂದ ವಾಹನಗಳಿಂದ ಬರುವ ಹೊಗೆಯು ದಟ್ಟವಾದ ಧೂಳಿನ ಮೋಡವನ್ನು ಸೃಷ್ಟಿಸುತ್ತವೆ. ಇಂತಹ ಹೊಗೆಯ ಮೋಡದಲ್ಲಿ ಸಿಲುಕಿದಾಗ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಸಹಜ. ಭಾರತದ ಹೆಚ್ಚಿನ ನಗರಗಳು ವಿಶೇಷವಾಗಿ ಮೆಟ್ರೋಪಾಲಿಟನ್ ಸಿಟಿಗಳು ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್‌ಗಳ ಹೆಚ್ಚಳದಿಂದ ಪರಿಸರ ಮಾಲಿನ್ಯದ ಕೇಂದ್ರಗಳಾಗಿವೆ. ಇದರಲ್ಲಿ ಸಾರಿಗೆ ಕ್ಷೇತ್ರವು ಪರಿಸರ ಮಾಲಿನ್ಯಕ್ಕೆ ಪ್ರಮುಖ ಪಾಲನ್ನು ಅಂದರೆ ಸುಮಾರು ಶೇ. 70 ಮಾಲಿನ್ಯಕ್ಕೆ ಕಾರಣವಾಗಿದೆ. ಈ ಮಾಲಿನ್ಯಕಾರಕಗಳಲ್ಲಿ ಇಂಗಾಲದ ಡೈ ಆಕ್ಸೈಡ್ ಸಾರಿಗೆ ವಲಯದಿಂದ ಬರುವ ಪ್ರಮುಖ ಮಾಲಿನ್ಯಕಾರಕವಾಗಿದೆ. ಇದು ಒಟ್ಟು ಹೊರಸೂಸುವಿಕೆಯ ಶೇ. 90ರಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ.

ಹೈಡ್ರೋಕಾರ್ಬನ್‌ಗಳು ಇಂಗಾಲದ ಡೈ ಆಕ್ಸೈಡ್‌ನ ಸಮೀಪವರ್ತಿಗಳಾಗಿದ್ದು, ಸಾರಿಗೆ ವಲಯದ ಶೇ. 3-5ರಷ್ಟು ಮಾಲಿನ್ಯಕ್ಕೆ ಕೊಡುಗೆ ನೀಡಿವೆ. ನಗರಗಳಲ್ಲಿ ಟ್ರಾಫಿಕ್ ದಟ್ಟಣೆಯು ಬಹುದೊಡ್ಡ ಸಮಸ್ಯೆಯಾಗಿದೆ. ಇದು ಕೇವಲ ಸಮಯವನ್ನು ಹಾಳು ಮಾಡುವುದಿಲ್ಲ. ಬದಲಾಗಿ ಹೆಚ್ಚಿನ ಪ್ರಮಾಣದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿರುವುದು ಕಳವಳಕಾರಿಯಾಗಿದೆ. ಟ್ರಾಫಿಕ್ ದಟ್ಟಣೆಯು ವಾಹನಗಳ ಹೊಗೆಯ ಹೊರಸೂಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಸುತ್ತುವರಿದ ಗಾಳಿಯ ಗುಣಮಟ್ಟವನ್ನು ಕುಗ್ಗಿಸುತ್ತದೆ. ಪದೇ ಪದೇ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಿರುವ ಚಾಲಕರು ಮತ್ತು ಪ್ರಯಾಣಿಕರು ಹೆಚ್ಚಿನ ಅಸ್ವಸ್ಥತೆಗೆ ಒಳಗಾಗುತ್ತಿರುವುದನ್ನು ಕೆಲವು ಅಧ್ಯಯನಗಳು ತೋರಿಸಿವೆ. ಅಸ್ವಸ್ಥತೆಯು ಚಾಲಕರು ಮತ್ತು ಪ್ರಯಾಣಿಕರ ಆರೋಗ್ಯವನ್ನು ಕಡಿಮೆ ಮಾಡುತ್ತದೆ. ವಾಯು ಮಾಲಿನ್ಯಕ್ಕೆ ಒಳಗಾಗುವ ಪ್ರಯಾಣಿಕರು, ವಿಶೇಷವಾಗಿ ಆಟೊಗಳು, ಇ-ರಿಕ್ಷಾಗಳು, ಸೈಕಲ್ ರಿಕ್ಷಾಗಳು ಮತ್ತು ಮೋಟಾರು ಸೈಕಲ್‌ಗಳಂತಹ ಹವಾನಿಯಂತ್ರಿತವಲ್ಲದ ವಾಹನಗಳಲ್ಲಿ ಸವಾರಿ ಮಾಡುವವರ ಆರೋಗ್ಯದ ಅಪಾಯಗಳು ದ್ವಿಗುಣಗೊಳ್ಳುತ್ತಿವೆ. ಟ್ರಾಫಿಕ್‌ನ ವಾಯು ಮಾಲಿನ್ಯವು ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಕೊಡುಗೆ ನೀಡುತ್ತದೆ. ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಜೊತೆಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಮಾರಣಾಂತಿಕವಾಗಬಹುದು. ಟ್ರಾಫಿಕ್ ಅವ್ಯವಸ್ಥೆಯಲ್ಲಿ ಸಿಲುಕಿರುವ ಕೆಲವು ಪ್ರಯಾಣಿಕರು ನಿದ್ರೆಯಿಂದ ವಂಚಿತರಾಗುತ್ತಾರೆ, ನಿದ್ರಾಹೀನತೆಯು ಕಾರ್ಯಕ್ಷಮತೆ, ಗಮನ ಮತ್ತು ದೀರ್ಘಕಾಲೀನ ಸ್ಮರಣೆಯ ಮೇಲೂ ಪರಿಣಾಮ ಬೀರಬಹುದು. ಇದಲ್ಲದೆ ನಿದ್ರೆಯ ಕೊರತೆಯು ಆತಂಕ, ಬಳಲಿಕೆ, ಹತಾಶೆ, ಹಠಾತ್ ವರ್ತನೆ ಸೇರಿದಂತೆ ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಮಾದಕ ದ್ರವ್ಯ ಮತ್ತು ಮದ್ಯವನ್ನು ಉತ್ತೇಜಿಸುತ್ತದೆ. ಕೆಲವರಲ್ಲಿ ತೀವ್ರವಾದ ಮೂತ್ರದ ಸೋಂಕುಗಳು ಕಾಣಿಸಿಕೊಂಡಿವೆ. ಅದು ಮನೋವಿಕೃತ ವರ್ತನೆಗೆ ಕಾರಣವಾಗಬಹುದು.

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಬಹುತೇಕ ಪ್ರಯಾಣಿಕರು (ನೀರಿನ ಬಾಟಲಿ ಕೊಂಡೊಯ್ಯದವರು) ಬಾಯಾರಿಕೆಯನ್ನು ಅನುಭವಿಸುತ್ತಾರೆ. ಇದು ನಿರ್ಜಲೀಕರಣದ ಕಾರಣದಿಂದಾಗಿ ಕಡಿಮೆ ರಕ್ತದೊತ್ತಡವನ್ನು ಉಂಟುಮಾಡಬಹುದು. ದಟ್ಟವಾದ ಟ್ರಾಫಿಕ್‌ನಲ್ಲಿ ಸಿಲುಕುವವರಲ್ಲಿ ರಕ್ತದ ಅಡ್ರಿನಾಲಿನ್ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಟ್ರಾಫಿಕ್‌ನ ದಟ್ಟಣೆಯಲ್ಲಿ ಪೊಲೀಸರು ಸಹ ಹೆಚ್ಚು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಪೊಲೀಸರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಅನುಭವಿಸುವ ಬಹುತೇಕ ಕಾಯಿಲೆಗಳು ಟ್ರಾಫಿಕ್‌ನ ಹೊಗೆ ಮತ್ತು ಧೂಳಿನಿಂದ ಬಂದಿರುತ್ತವೆ. ಇವೆಲ್ಲಕ್ಕಿಂತ ಇನ್ನೊಂದು ಗಂಭೀರ ಸಮಸೆಯನ್ನು ಬೋಸ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರ ನೇತೃತ್ವದ ತಂಡವೊಂದು ಗುರುತಿಸಿದೆ. ಅದೇನೆಂದರೆ ಟ್ರಾಫಿಕ್‌ನಲ್ಲಿ ಗರ್ಭಿಣಿಯರು ಸಿಲುಕುವುದರಿಂದ ಜನಿಸುವ ಮಕ್ಕಳ ತೂಕವು ಕಡಿಮೆಯಾಗಿರುತ್ತದೆ ಎಂಬುದು ತುಂಬಾ ಕಳವಳಕಾರಿಯಾಗಿದೆ.

ಭಾರೀ ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ವಾಸಿಸುವ ಪೋಷಕರಿಗೆ ಜನಿಸಿದ ಶಿಶುಗಳ ಜನನ ತೂಕದಲ್ಲಿ ಒಂಭತ್ತು ಗ್ರಾಂ ಕಡಿತ ಉಂಟಾಗಿರುವುದನ್ನು ಅಧ್ಯಯನಕಾರರು ಗುರುತಿಸಿದ್ದಾರೆ. ಇದಕ್ಕೆ ಪರಿಹಾರವಿಲ್ಲವೇ ಎಂಬ ಚಿಂತೆ ನಮ್ಮನ್ನು ಕಾಡದಿರದು. ಪ್ರಯಾಣವನ್ನು ಕಡಿಮೆ ಮಾಡಿದರೆ ಅಥವಾ ನಿಲ್ಲಿಸಿದರೆ ಇವೆಲ್ಲ ಸಮಸ್ಯೆಗಳು ಇರುವುದಿಲ್ಲ ಎಂಬ ಪುಕ್ಕಟೆ ಸಲಹೆ ಸುಲಭ. ಆದರೆ ಕೆಲವು ವರ್ಗದ ಜನರಿಗೆ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಪ್ರಯಾಣವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವು ಅನುಸರಣ ತಂತ್ರಗಳಿಂದ ಟ್ರಾಫಿಕ್‌ನ ಧೂಳು ಮತ್ತು ಹೊಗೆಯಿಂದ ರಕ್ಷಣೆ ಪಡೆಯಬಹುದು. ಟ್ರಾಫಿಕ್ ಭರಿತ ಪ್ರವಾಸವನ್ನು ಆನಂದದಾಯಕವಾಗಿ ಮಾಡಬೇಕಾಗಿದೆ. ಅದಕ್ಕಾಗಿ ವಿಪರೀತ ಸಮಯದ ಬದಲಿಗೆ ವಿಭಿನ್ನ ಸಮಯಗಳಲ್ಲಿ ಪ್ರಯಾಣ ಕೈಗೊಳ್ಳುವುದು ಒಂದು ತಂತ್ರವಾಗಿದೆ.

ಟ್ರಾಫಿಕ್‌ನಲ್ಲಿ ನಾವು ಒತ್ತಡಕ್ಕೆ ಒಳಗಾಗುವ ಪ್ರಮುಖ ಕಾರಣವೆಂದರೆ ನಾವು ಕೆಲಸಕ್ಕೆ ತಡವಾಗಿ ಬರಲು ಭಯಪಡುತ್ತೇವೆ. ವಿಳಂಬವು ಒತ್ತಡ ಮತ್ತು ಕಿರಿಕಿರಿಯನ್ನು ಹೆಚ್ಚಿಸುವುದರಿಂದ ಸ್ವಲ್ಪ ಮುಂಚಿತವಾಗಿ ಪ್ರಾರಂಭಿಸುವುದು ಉತ್ತಮ. ಸಾಧ್ಯವಾದರೆ ಒಬ್ಬೊಬ್ಬರು ಒಂದೊಂದು ವಾಹನದಲ್ಲಿ ಪ್ರಯಾಣಿಸುವ ಬದಲು ಸಹ ಪ್ರಯಾಣಿಕರೊಂದಿಗೆ ಒಂದೇ ವಾಹನದಲ್ಲಿ ಸಂಚರಿಸುವುದು. ಆದ್ದರಿಂದ ಹತ್ತಿರದಲ್ಲೇ ಇರುವ ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಕಾರ್-ಪೂಲಿಂಗ್ ಅನ್ನು ಆಯ್ಕೆ ಮಾಡಲು ಪ್ರಯತ್ನಿಸುವುದು ಒಂದು ಉತ್ತಮ ತಂತ್ರವಾಗಿದೆ. ಇದರಿಂದ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಅನಗತ್ಯ ವಿಷಯಗಳ ಬಗ್ಗೆ ಮಾತನಾಡುವುದೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ ಈ ಸಮಯವನ್ನು ಅಮೂಲ್ಯವಾದ ‘ಮೈ-ಟೈಮ್’ ಆಗಿ ಬಳಸಬೇಕು. ಹಿತವಾದ ಸಂಗೀತವನ್ನು ಪ್ಲೇ ಮಾಡುವ ಪ್ರತ್ಯೇಕ ಪ್ಲೇಪಟ್ಟಿಗೆ ವ್ಯವಸ್ಥೆ ಮಾಡಿಕೊಳ್ಳುವುದು. ಸಂಗೀತ ಅಥವಾ ಪುಸ್ತಕವನ್ನು ಕೇಳುವುದರಿಂದ ಮನಸ್ಸು ವಿಚಲಿತವಾಗುವುದಿಲ್ಲ ಮತ್ತು ಇದು ನಮಗೆ ಶಾಂತವಾಗಿರಲು ಸಹಾಯ ಮಾಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಇಂತಹ ಸಣ್ಣ ಬದಲಾವಣೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಟ್ರಾಫಿಕ್ ಜಾಮ್‌ನ ದುಷ್ಪರಿಣಾಮಗಳು ಮತ್ತು ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ನಿಭಾಯಿಸಲು ಗಣನೀಯವಾಗಿ ಸಹಾಯ ಮಾಡಬಹುದು.

ಅಲ್ಲದೆ ಟ್ರಾಫಿಕ್ ಸಿಗ್ನಲ್‌ಗಳ ಬಳಿ ಚಾಲಕರು ಸ್ವಯಂ ಮುತುವರ್ಜಿ ವಹಿಸಿ ವಾಹನಗಳನ್ನು ಆಫ್ ಮಾಡುವುದು ಬಹು ಮಹತ್ವದ ಆರೋಗ್ಯಕಾರಿ ತಂತ್ರವಾಗಿದೆ. ಇದರಿಂದ ಹೊಗೆ ಮತ್ತು ಧೂಳು ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಭವಿಷ್ಯದ ಆರೋಗ್ಯಯುತ ಸಮಾಜಕ್ಕಾಗಿ ಒಂದಿಷ್ಟು ಗಟ್ಟಿ ನಿರ್ಧಾರಯುತ ತಂತ್ರಗಳು ಅನಿವಾರ್ಯ. ಅಲ್ಲವೇ?

share
ಆರ್.ಬಿ.ಗುರುಬಸವರಾಜ
ಆರ್.ಬಿ.ಗುರುಬಸವರಾಜ
Next Story
X