ಬೆಂಗಳೂರು: ‘ಜನ ಸಾಹಿತ್ಯ ಸಮ್ಮೇಳನ’ ಉದ್ಘಾಟನೆ

ಬೆಂಗಳೂರು, ಜ.8: ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರಂಪರೆ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಕಡೆಗಣನೆಯನ್ನು ಖಂಡಿಸಿ, ಪರ್ಯಾಯವಾಗಿ ಕೆ.ಆರ್. ವೃತ್ತದಲ್ಲಿನ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಆಯೋಜಿಸಿರುವ ‘ಜನ ಸಾಹಿತ್ಯ ಸಮ್ಮೇಳನ’ ರವಿವಾರ ಬೆಳಗ್ಗೆ ಉದ್ಘಾಟನೆಗೊಂಡಿತು.
‘ಚಂಪಾ ವೇದಿಕೆ’ಯಲ್ಲಿ ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಸಮ್ಮೇಳನವನ್ನು ಉದ್ಘಾಟಿಸಿದರು. ಸಾಹಿತಿ ಬಾನು ಮುಸ್ತಾಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಪ್ರೊ.ಎಸ್.ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ, ಜನ್ನಿ(ಜನಾರ್ದನ್), ಅಗ್ನಿ ಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ, ನಟ ಪ್ರಕಾಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ವ್ಯಂಗ್ಯಚಿತ್ರ ಮತ್ತು ಪೋಸ್ಟರ್‌ಗಳ ಪ್ರದರ್ಶನವನ್ನು ಕಲಾವಿದ ರಘುನಂದನ ಉದ್ಘಾಟಿಸಿದರು. ಖ್ಯಾತ ವ್ಯಂಗ್ಯ ಚಿತ್ರಕಾರರಾದ ಪಿ.ಮುಹಮ್ಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ, ಪಂಜುಗಂಗೊಳ್ಳಿ, ಬಾದಲ್ ನಂಜುಂಡಸ್ವಾಮಿ, ಚೇತನ್ ಪುತ್ತೂರು, ರೂಮಿ ಹರೀಶ್ ರೂಪಶ್ರೀ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ ಸೇರಿದಂತೆ ಇನ್ನಿತರ ಕಲಾವಿದರು ಉಪಸ್ಥಿತರಿದ್ದರು.
9 ಗಂಟೆಗೆ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.
ಮಧ್ಯಾಹ್ನ 12:30ರಿಂದ 1:30ಕ್ಕೆ ‘ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ’ ವಿಚಾರಗೋಷ್ಠಿ ನಡೆಯಲಿದೆ. ಡಾ.ಮಹಮ್ಮದ್ ಮುಸ್ತಫಾ ವಿಷಯ ಮಂಡನೆ ಮಾಡಲಿದ್ದಾರೆ. ‘ಕನ್ನಡ ನಾಡು ನುಡಿ-ಟಿಪ್ಪು ಕೊಡುಗೆಗಳು’ ಕುರಿತು ಪತ್ರಕರ್ತ ಟಿ.ಗುರುರಾಜ್ ಮಾತನಾಡಲಿದ್ದಾರೆ. ಲಿಂಗದೇವರು ಹಳೆಮನೆ ಸಂಪಾದಕತ್ವದ ‘ಧೀರ ಟಿಪ್ಪು ಲಾವಣಿಗಳು’ ಮತ್ತು ಟಿ.ಗುರುರಾಜ್ ಬರೆದಿರುವ ‘ನಮ್ಮ ಟಿಪ್ಪು-ವದಂತಿ ಮತ್ತು ಸತ್ಯ ಸಂಗತಿ’ ಪುಸ್ತಕಗಳ ಬಿಡುಗಡೆ ಮಾಡಲಿದ್ದು, ನಾ.ದಿವಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಡಾ.ಜಿ.ರಾಮಕೃಷ್ಣ ವಹಿಸಲಿದ್ದು, ಸಮಾರೋಪ ಭಾಷಣವನ್ನು ಡಾ.ಕೆ. ಮರುಳಸಿದ್ದಪ್ಪ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಿ.ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ದು.ಸರಸ್ವತಿ, ಯು.ಟಿ.ಫರ್ಝಾನ, ವಸಂತರಾಜ್, ಅನಂತ್ ನಾಯ್ಕ್, ರವಿಕುಮಾರ್ ಟೆಲೆಕ್ಸ್ ಪಾಲ್ಗೊಳ್ಳಲಿದ್ದಾರೆ.






.jpeg)
.jpeg)
.jpeg)
.jpeg)
.jpeg)
.jpeg)




.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)

