ಹಿಮಾಚಲದಲ್ಲಿ ಸಂಪುಟ ವಿಸ್ತರಣೆ: ಮಾಜಿ ಸಿಎಂ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸೇರಿದಂತೆ 7 ಸಚಿವರ ಸೇರ್ಪಡೆ

ಶಿಮ್ಲಾ: ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿದಂತೆ ಏಳು ಸಚಿವರ ಸೇರ್ಪಡೆಯೊಂದಿಗೆ 4 ವಾರಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರಕಾರದ ಸಂಪುಟವನ್ನು ರವಿವಾರ ವಿಸ್ತರಿಸಲಾಗಿದೆ.
ಏಳು ಸದಸ್ಯರ ಸೇರ್ಪಡೆಯೊಂದಿಗೆ ಸಂಪುಟದ ಬಲ ಒಂಬತ್ತಕ್ಕೆ ಏರಿತು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಏಳು ಶಾಸಕರನ್ನು ಹೊಂದಿರುವ ಶಿಮ್ಲಾ ಜಿಲ್ಲೆಗೆ ಮೂವರು ಸಚಿವರು ಹಾಗೂ ಒಬ್ಬ ಮುಖ್ಯ ಸಂಸದೀಯ ಕಾರ್ಯದರ್ಶಿ (ಸಿಪಿಎಸ್) ಸೇರಿದಂತೆ ಸಂಪುಟದಲ್ಲಿ ಸಿಂಹಪಾಲು ನೀಡಲಾಗಿದ್ದು, ಬಿಲಾಸ್ಪುರ್, ಮಂಡಿ ಹಾಗೂ ಲಾಹೌಲ್ ಮತ್ತು ಸ್ಪಿತಿ ಯಾವುದೇ ಪ್ರಾತಿನಿಧ್ಯವನ್ನು ಪಡೆಯುವಲ್ಲಿ ವಿಫಲವಾಗಿವೆ.
ಮುಖ್ಯಮಂತ್ರಿ ಸೇರಿದಂತೆ ಸಚಿವರ ಸಂಖ್ಯೆಯು 12 ಮೀರಬಾರದು ಎಂಬ ಕಾರಣದಿಂದ ಉಪಸಭಾಪತಿ ಹುದ್ದೆಯ ಜೊತೆಗೆ ಮೂರು ಸ್ಥಾನಗಳು ಇನ್ನೂ ಖಾಲಿ ಇವೆ.
Next Story





