ಉಡುಪಿ: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ 'ಶಾಪ್ ಆ್ಯಂಡ್ ವಿನ್' ಸ್ಕೀಮ್‌ನ ಮಾಸಿಕ ಡ್ರಾ

ಉಡುಪಿ, ಜ.8: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಪ್ರತೀ ಖರೀದಿಯ ಮೇಲೆ ಗ್ರಾಹಕರಿಗೆ ನೀಡುವ ಶಾಪ್ ಆ್ಯಂಡ್ ವಿನ್ ಸ್ಕೀಮ್‌ನ ಮಾಸಿಕ ಡ್ರಾದಲ್ಲಿ ಮೂರನೆ ತಿಂಗಳ ವಾಶಿಂಗ್ ಮೆಷಿನ್ ಬಹುಮಾನವನ್ನು ಝೈನಾಬ್ ಸರ್ಫ್ರಾಝ್ ಶೇಕ್ ಗೆದ್ದುಕೊಂಡಿದ್ದಾರೆ.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಮಳಿಗೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಉಡುಪಿ ಬ್ರೈಡಲ್ ವರ್ಲ್ಡ್ ನ ಆಡಳಿತ ನಿರ್ದೇಶಕ ರಹ್ಮಾನ್ ಬಹುಮಾನ ವಿತರಿಸಿದರು.
ಸುಲ್ತಾನ್ ಉಡುಪಿ ಶಾಖಾ ಮ್ಯಾನೇಜರ್ ಮುಹಮ್ಮದ್ ಅಜ್ಮಲ್, ಸೇಲ್ಸ್ ಮ್ಯಾನೇಜರ್ ಇಲ್ಯಾಸ್ ವಯನಾಡ್, ಫ್ಲೋರ್ ಮ್ಯಾನೇಜರ್ ಸಿದ್ದೀಕ್ ಹಸನ್, ವಾಚ್ ಇನ್ಚಾರ್ಜ್ ಅಬ್ದುಲ್ ರಶೀದ್ ಮುಲ್ಕಿ, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಈ ಸ್ಕಿಮ್‌ನ ಪ್ರತಿ ದಿನದ ಡ್ರಾಗಳಲ್ಲಿ ಈಗಾಗಲೇ 1,000ಕ್ಕೂ ಅಧಿಕ ಮಂದಿ ಗ್ರಾಹಕರು ಕುಕ್ಕರ್ ಬಹುಮಾನವಾಗಿ ಪಡೆದುಕೊಂಡಿದ್ದಾರೆ. ವಾರದ ಡ್ರಾನಲ್ಲಿ ಮಿಕ್ಸಿ/ಫ್ಯಾನ್, ಮಾಸಿಕ ಡ್ರಾದಲ್ಲಿ ವಾಶಿಂಗ್ ಮೆಷಿನ್ ಬಹುಮಾನವಾಗಿ ನೀಡಲಾಗುತ್ತದೆ. ಬಂಪರ್ ಡ್ರಾದಲ್ಲಿ ಬಹುಮಾನ ಹುಂಡೈ ಗ್ರಾಂಡ್ ಐ10 ನಿಯೋಸ್ ಕಾರನ್ನು ನೀಡಲಾಗುವುದು. ಈ ಕೊಡುಗೆ ಜನವರಿ 30ವರೆಗೆ ಇದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಡುಪಿ ಶಾಖಾ ಮ್ಯಾನೇಜರ್ ಮುಹಮ್ಮದ್ ಅಜ್ಮಲ್ ತಿಳಿಸಿದ್ದಾರೆ.







