ಕೊಣಾಜೆ: ಮಾಜಿ ಪಟೇಲ ರಘುರಾಮ ಕಾಜವ ನಿಧನ

ಕೊಣಾಜೆ, ಜ.8: ಮಾಜಿ ಪಟೇಲ, ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡರೂ ಆದ ರಘುರಾಮ ಕಾಜವ ಪಟ್ಟೋರಿ (83) ರವಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೊಣಾಜೆಯ ಮಾಜಿ ಪಟೇಲರೂ ಆಗಿದ್ದ ಇವರು, ಅಸೈಗೋಳಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ಅಸೈಗೋಳಿ ಅಭಯಾಶ್ರಯದ ನಿರ್ದೇಶಕರಾಗಿ, ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ, ಸದಸ್ಯರಾಗಿ, ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿ, ಪಟ್ಟೋರಿ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಹಾಗೂ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು.
ಅವರ ವಿವಾಹ ಸುವರ್ಣ ವರ್ಷವನ್ನು ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ಸಹಕಾರ ನೀಡುವ ಮೂಲಕ ಸರಳವಾಗಿ ಆಚರಿಸಿದ್ದರು. ಅವರು ಪಟೇಲರಾಗಿದ್ದ ವೇಳೆ ಕೊಣಾಜೆ ಮಂಗಳೂರು ವಿವಿಯ ನಿರ್ಮಾಣಕ್ಕೆ ಸ್ಥಳ ಶೋಧನೆಗಾಗಿ ರಚಿಸಿದ್ದ ಸ್ಥಳೀಯ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.