ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮನವಿ

ಮಂಗಳೂರು: ಬಂಟ ಸಮಾಜವನ್ನು ಪ್ರವರ್ಗ 2‘ಎ’ಯಲ್ಲಿ ಸೇರ್ಪಡೆ ಸಹಿತ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರ್ಮಿಸುವ ನೂತನ ಕಟ್ಟಡಕ್ಕೆ ಅನುದಾನ ಹಾಗೂ ಸಮಾಜಕ್ಕೆ ಸವಲತ್ತುಗಳನ್ನು ನೀಡುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದೆ.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಮಹಾನಿರ್ದೇಶಕ ತೋನ್ಸೆ ಆನಂದ ಶೆಟ್ಟಿ, ನಿರ್ದೇಶಕ ಶಶಿಧರ ಶೆಟ್ಟಿ ಬರೋಡ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ ನಿಯೋಗದಲ್ಲಿದ್ದರು.
Next Story





