ಎಸ್ಕೆಎಸ್ಸೆಸ್ಸೆಫ್‌ಕೊಲ್ನಾಡು ಘಟಕದಿಂದ ವಾರ್ಷಿಕ ಮಜ್ಲಿಸುನ್ನೂರ್,ಮರ್ಹೂಂ ಬದರುಲ್‌ಮುನೀರ್,ನೌಶಾದ್‌ಹಾಜಿ ಅನುಸ್ಮರಣೆ

ಮುಲ್ಕಿ: ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಘಟಕದ ವತಿಯಿಂದ ವಾರ್ಷಿಕ ಮಜ್ಲಿಸುನ್ನೂರ್ ಹಾಗೂ ಮರ್ಹೂಂ ಬದರುಲ್ ಮುನೀರ್ ಮತ್ತು ನೌಶಾದ್‌ಹಾಜಿ ಸೂರಲ್ಪಾಡಿ ಅವರ ಅನುಸ್ಮರಣೆ ಕಾರ್ಯಕ್ರಮವು ಶನಿವಾರ ರಾತ್ರಿ ಕೊಲ್ನಾಡು ಶಾಖೆಯ ಕಚೇರಿ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಗೈದು ಮಾತನಾಡಿದ ಎಸ್ಕೆಎಸ್ಸೆಸ್ಸೆಫ್‌ಇಸ್ತಿಖಾಮಾದ ರಾಜ್ಯ ಉಪಾಧ್ಯಕ್ಷ ಇಸ್ಹಾಕ್‌ಫೈಝಿ ಕುಕ್ಕಿಲ, ಶಾಂತಿ, ಸೌಹಾರ್ದ, ಸಹಬಾಳ್ವೆಯನ್ನು ಕಲಿಸುವ ಜೊತೆಗೆ ಜೀವನದ ಉದ್ದಕ್ಕೂ ಪಾಳಿಸುವ ದೇಶದ ಅತೀ ದೊಡ್ದ ಧಾರ್ಮಿಕ ಸಂಘಟನೆ ಎಸ್ಕೆಎಸ್ಸೆಸ್ಸೆಫ್‌ಎಂದರು.
ಸಮುದಾಯದ ಮಕ್ಕಳು ಮಾಧಕ ವ್ಯಸನಗಳ ದಾಸರಾಗುತ್ತಿದ್ದಾರೆ. ಮತ್ತೊಂದೆಡೆ ಸಮುದಾಯವನ್ನು ಗುರಿಯಾಗಿಸಿ ಯುವಕರ ಮೇಲೆ ಗುಂಪು ಹಲ್ಲೆಗಳು, ಕೊಲೆ, ರಕ್ತಪಾತಗಳು ನಡೆಯುತ್ತಿವೆ. ಇಂತಹಾ ಕುಕೃತ್ಯಗಳು ಸಮುದಾಯದ ಮೇಲೆ ನಡೆಯುತ್ತಿದ್ದರೂ ನಮಗೆ ನ್ಯಾಯನಿರಾಕರಿಸಲಾಗುತ್ತಿದೆ. ಸರಕಾರವೂ ಹಲ್ಲೆಕೋರರ ಪರವಾಗಿ ನಿಂತುಕೊಂಡು ಹಲ್ಲೆಗೊಳಗಾದ, ಹತ್ಯೆಗೊಳಗಾದ ಸಮುದಾಯದ ಯುವಕರಿಗೆ ನ್ಯಾಯವಾಗಲೀ, ಪರಿಹಾರವಾಗಲೀ ಕನಿಷ್ಠ ಸಾಂತ್ವನದ ನುಡಿಗಳನ್ನು ಹೇಳಲು ಮುಂದಾಗುತ್ತಿಲ್ಲ ಎಂದು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಹಿಂದೂ - ಮುಸ್ಲಿಮರ ಭಾವೈಕ್ಯೆಗೆ ಯಾವುದೇ ಧಕ್ಕೆ ಇಲ್ಲ. ಆದರೆ, ರಾಜಕೀಯ ಲಾಭಕ್ಕಾಗಿ ನಮ್ಮ ಮಧ್ಯೆ ಬಿನ್ನಾಭಿಪ್ರಾಯಗಳನ್ನು ತಂದು ಹಿಂದೂ ಮುಸ್ಲಿಂ ಎಂದು ವಿಭಜಿಸಿಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಯುವಕರು ಮಾಧಕ ವ್ಯಸನಿಗಳಾಗುತ್ತಿರುವ ಕುರಿತು ಎಲ್ಲಾ ಜಮಾಅತ್‌ಗಳು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಬೊಳ್ಳೂರು ಮುಹಿಯುದ್ದೀನ್‌ಜುಮಾ ಮಸೀದಿಯ ಝತೀಬರಾದ ಶೈಖುನಾ ಬೊಳ್ಳೂರು ಉಸ್ತಾದ್‌ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಘಟಕದ ಅಧ್ಯಕ್ಷ ಯಾಸೀರ್‌ಮಾಸ್ಟರ್‌ಮುಲ್ಕಿ ವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಘಟಕದ ಟ್ರೆಂಡ್‌ಕಾರ್ಯದರ್ಶಿ ಇರ್ಷಾದ್‌ಕೆರೆಕಾಡು ಸ್ವಾಗತಿಸಿದರು. ಕೊಲ್ನಾಡು ಶಾಫಿ ಜುಮಾ ಮಸೀದಿಯ ಖತೀಬ್ ಶರೀಫ್‌ರಾರಿಮಿ ಅಲ್- ಹೈತಮಿ ಪ್ರಾಸ್ತಾವಿಕ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಅಧ್ಯಕ್ಷ ಸೈಯ್ಯದ್‌ಅಮೀರ್‌ತಂಙಳ್‌ಕಿನ್ಯ ದುವಾ ಆಶೀರ್ವಚನಗೈದರು.
ಇದೇ ಸಂದರ್ಭ ದ.ಕ. ಜಿಲ್ಲಾ ವಿಖಾಯ ಕೌನ್ಸಿಲರ್‌ಆಗಿ ಆಯ್ಕೆಗೊಂಡ ಮುಹಿಯುದ್ದೀನ್‌ಶಹೀರ್‌ಕೊಲ್ನಾಡು ಅವರನ್ನು ಸನ್ಮಾನಿಸಿ ನೆನಪಿನ ಕಾಣಿಗೆ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್‌ಅಬ್ದುಲ್‌ಖಾದರ್, ಅಂಗರಗುಡ್ಡೆ ಶಾಫಿ ಜುಮಾ ಮಸೀದಿಯ ಖತೀಬ್‌ಶಿಹಾಬುದ್ದೀನ್‌ಫೈಝಿ, ಎಸ್ಕೆಎಸ್ಸೆಸ್ಸೆಫ್‌ಮುಲ್ಕಿ ಕ್ಲಸ್ಟರ್‌ಅಧ್ಯಕ್ಷ ಎಂ. ಇಸ್ಮಾಯೀಲ್‌ಕೊಲ್ನಾಡು, ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್‌ವಲಯ ಪ್ರಧಾನ ಕಾರ್ಯದರ್ಶಿ ತ್ವಯ್ಯಿಬ್‌ಫೈಝೀ, ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್‌ವಲಯ ಅಧ್ಯಕ್ಷ ಇಲ್ಯಾಸ್‌ಸೂರಿಂಜೆ, ಹಳೆಯಂಗಡಿ ಸಂತೆಕಟ್ಟೆ ಜುಮಾ ಮಸೀದಿಯ ಸದರ್ ಮುಅಲ್ಲಿಂ ರಶೀದ್‌ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್‌ಮುಲ್ಕಿ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ನೌಫಲ್, ಮುಲ್ಕಿ ನಗರ ಪಂಚಾಯತ್‌ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್, ಕೊಲ್ನಾಡು ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್‌ಬಾವಾ, ಕೊಲ್ನಾಡು ಶಾಫಿ ಜುಮಾ ಮಸೀದಿಯ ಮಾಜೀ ಅಧ್ಯಕ್ಷ ಎ.ಎಚ್. ರಫೀಕ್, ದಫ್‌ಉಸ್ತಾದ್‌ಜವಾದ್ ಕೊಳ್ನಾಡ್, ಕೊಳ್ನಾಡ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಬೀನ್, ಕೊಳ್ನಾಡ್ ಶಾಖೆಯ ಕೋಶಾಧಿಕಾರಿ ಅಬ್ದುಲ್‌ರಝಾಕ್, ಸಾಮಾಜಿಕ ಕಾರ್ಯಕರ್ತ ಶಮೀರ್ ಎ.ಎಚ್., ಎಸ್ಕೆಎಸ್ಸೆಸ್ಸೆಫ್ ಕೊಳ್ನಾಡ್ ಶಾಖೆ ಅಧ್ಯಕ್ಷ ಇಮ್ರಾನ್, ಸಮಾಜ ಸೇವಕ ಬಶೀರ್‌ಕುಳಾಯಿ, ಕೊಳ್ನಾಡ್ ಶಾಫಿ ಜುಮಾ ಮಸೀದಿಯ ಉಪಾಧ್ಯಕ್ಷ ಬಶೀರ್ ಕೇಬಲ್, ಉದ್ಯಮಿ ಅಬ್ದುಲ್‌ಖಾದರ್, ಕೊಳ್ನಾಡ್ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷ ಮುಹಮ್ಮದ್‌ಆಲಿ, ಎಸ್ಕೆಎಸ್ಬಿವಿ ಕೊಳ್ನಾಡ್ ಅಧ್ಯಕ್ಷ ಮುಹಮ್ಮದ್ ನವೀದ್ ಮೊದಲಾದವರು ಉಪಸ್ಥಿತರಿದ್ದರು.
ಸಹೀರ್‌ಕೊಲ್ನಾಡು ಕಿರಾಅತ್ ಪಠಿಸಿದರು. ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್‌ವಲಯ ಪ್ರಧಾನ ಕಾರ್ಯದರ್ಶಿ ತ್ವಯ್ಯಿಬ್‌ಫೈಝಿ ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆಯ ಕಾರ್ಯವೈಖರಿಯನ್ನು ಪರಿಚಯಿಸಿದರು.
ಕೊಳ್ನಾಡ್ ಶಾಖೆಯ ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ರಾಹಿಲ್ ಧನ್ಯವಾದ ಸಮರ್ಪಿಸಿದರು.







