ಮಲ್ಪೆ: ಲಾಡ್ಜ್‌ನಲ್ಲಿ ತಂಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಮಲ್ಪೆ: ಇಲ್ಲಿನ ಲಾಡ್ಜಿನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಸುಶೀಲ್ ರಘುರಾಮ್ ಶೆಟ್ಟಿ (42) ಎಂಬವರೇ ಮೃತ ವ್ಯಕ್ತಿ.
ಇವರು ಮುಂಬಯಿ ನಿವಾಸಿಯಾಗಿದ್ದು, ಡಿ.28ರಂದು ಮುಂಬಯಿಯಿಂದ ಊರಿಗೆ ಬಂದ ಇವರು ಡಿ.30ರಿಂದ ಮಲ್ಪೆಯ ಲಾಡ್ಜ್ ಒಂದರಲ್ಲಿ ತಂಗಿದ್ದರು.
ಜ.6ರಂದು ರಾತ್ರಿ 12 ಗಂಟೆಗೆ ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ರೂಮ್‌ಗೆ ಹೋದವರು ಮಾರನೇ ದಿನ ಬೆಳಿಗ್ಗೆ ರೂಮ್‌ನಿಂದ ಹೊರಗೆ ಬಾರದೇ ಇದ್ದ ಹಿನ್ನೆಲೆ ಸಂಶಯಗೊಂಡು ಸಂಬಂಧಿ, ಹೊಟೇಲ್ ಸಿಬ್ಬಂದಿ, ಪೊಲೀಸರ ಸಮಕ್ಷಮದಲ್ಲಿ ರೂಮ್‌ನ ಬಾಗಿಲು ಒಡೆದು ಪರಿಶೀಲಿಸಿದ್ದು, ಈ ವೇಳೆ ಸುಶೀಲ್ ರಘುರಾಮ್ ಶೆಟ್ಟಿರವರು ಮಲಗಿದ ಸ್ಥಿತಿಯಲ್ಲಿದ್ದರು. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಕಂಡುಬಂದಿದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story