ಇಸ್ರೇಲ್‌ನಿಂದ ನ್ಯಾಯಾಂಗದ ಸ್ವಾತಂತ್ರ ಮೊಟಕು: ಟೆಲ್‌ಅವೀವ್‌ನಲ್ಲಿ ಬೃಹತ್ ಪ್ರತಿಭಟನೆ
ಪ್ರಜಾಪ್ರಭುತ್ವದ ದಮನಕ್ಕೆ ಮುಂದಾಗಿರುವ ಬೆಂಜಮಿನ್ ಸರಕಾರ: ಪ್ರತಿಭಟನಕಾರರ ಆರೋಪ

ಟೆಹರಾನ್,ಜ.8: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ನೇತೃತ್ವದ ನೂತನ ಸರಕಾರವು ಜಾರಿಗೊಳಿಸಲು ಹೊರಟಿರುವ ಕೆಲವು ಯೋಜನೆಗಳು ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರಕ್ಕೆ ಬೆದರಿಕೆಯಾಗಿವೆ ಎಂದು ಆರೋಪಿಸಿ ಶನಿವಾರ ಸಂಜೆ ಸಾವಿರಾರು ನಾಗರಿಕರು ರಾಜಧಾನಿ ಟೆಲ್‌ಅವೀನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ದೇಶದ 74 ವರ್ಷಗಳ ಇತಿಹಾಸದಲ್ಲೇ ಕಟ್ಟಾ ಬಲಪಂಥೀಯ ಹಾಗೂ ಧಾರ್ಮಿವಾಗಿ ಸಂಪ್ರದಾಯವಾದಿಯಾದ ಸರಕಾರವು ಅಧಿಕಾರವಹಿಸಿಕೊಂಡ ಕೆಲವೇ ದಿನಗಳ ಬಳಿಕ ಈ ಪ್ರತಿಭಟನೆ ನಡೆದಿದೆ.
ಎಡಪಂಥೀಯರು, ಇಸ್ರೇಲ್ ಸಂಸತ್‌ನಲ್ಲಿರುವ ಅರಬ್‌ಸಮುದಾಯದ ಸಂಸದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ನೂತನ ಸರಕಾರವು ಈಗಾಗಲೇ ಪ್ರಸ್ತಾವಿಸಸಿರುವ ಯೋಜನೆಗಳು ನ್ಯಾಯಾಂಗ ವ್ಯವಸ್ಥೆಯ ಅಧಿಕಾರ ವ್ಯಾಪ್ತಿಯನ್ನು ಮೊಟುಗಳಿಸುವ ಹಾಗೂ ಸಾಮಾಜಿಕ ಅಂತರವನ್ನು ಹೆಚ್ಟಿಸುವ ಉದ್ದೇಶ ಹೊಂದಿವೆಯೆಂದವರು ಆರೋಪಿಸಿದ್ದಾರೆ.
ಈ ಯೋಜನೆಯು ಕಾನೂನು ವ್ಯವಸ್ತೆಯ ವಿರುದ್ಧ ಸಮರ ಸಾರಿದೆ. ನೂತನ ಆಡಳಿತ ಮೈತ್ರಿಕೂಟಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವ ಮೂಲಕ ಪ್ರಜಾತಾಂತ್ರಿಕ ಸಂಸ್ಥೆಗಳನು ಕ್ಷುಲ್ಲಕಗೊಳಿಸಿದೆ ಎಂದು ಅವು ಖಂಡಿಸಿವೆೆ.
ಭ್ರಷ್ಟಾಚಾರ ಆರೋಪಗಳಿಗಾಗಿ ದೋಷಿಯೆಂದು ನ್ಯಾಯಾಲಯದಿಂದ ಪರಿಗಣಿಸಲ್ಪಟ್ಟಿರುವ ನೆತನ್ಯಾಹು ಅವರು ುು ತನ್ನ ವಿರುದ್ಧದ ನ್ಯಾಯಾಂಗ ತನಿಖೆಯನ್ನು ತೊಡೆದುಹಾಕಬೇಕೆಂಬ ಏಕಮಾತ್ರ ಉದ್ದೇಶದಿಂದಾಗಿ ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸಲು ಹೊರಟಿದ್ದಾರೆ. ದೇಶವು ನಿರಂಕುಶತೆಡೆಯೆಗೆ ಸಾಗುತ್ತಿದೆ ಎಂದು ಪ್ರತಿಭಟನಕಾರರು ಆಪಾದಿಸಿದ್ದಾರೆ.
ಇಸ್ರೇಲ್‌ನಲ್ಲಿ ಯೆಹೂದಿಗಳು ಹಾಗೂ ಅರಬ್ಬರು ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳಬೇಕೆಂದು ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು. ಪೆಲೆಸ್ತೀನಿಯರು, ಅಲ್ಪಸಂಖ್ಯಾತರು ಹಾಗೂ ಎಲ್‌ಜಿಬಿಟಿಕ್ಯೂಗಳ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸಲು ಹೊರಟಿದೆಯೆಂದು ಅರಬ್ ಹಾಗೂ ಯಹೂದಿಗಳ ಏಕತೆಯನ್ನು ಪ್ರತಿಪಾದಿಸುವ ಸಂಘಟನೆ ‘ಸ್ಟಾಂಡಿಂಗ್ ಟುಗೆದರ್’ನ ನೂರುಲಾ ದಾವೂದ್ ಆರೋಪಿಸಿದ್ದಾರೆ.
ಇಸ್ರೇಲ್‌ನ ಕಾನೂನು ಸಚಿವ ಯಾರಿವ್ ಲೆವಿನ್ ಅವರು ಬುಧವಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ತರುವ ಯೋಜನೆಯೊಂದನ್ನು ಅನಾವರಣಗೊಳಿಸಿದ್ದರು. ಆದರೆ ಈ ಯೋಜನೆಯು ಸುಪ್ರೀಂಕೋರ್ಟ್ ಅನ್ನು ದುರ್ಬಲಗೊಳಿಸುವ ದುರುದ್ದೇಶವನ್ನು ಹೊಂದಿವೆಯೆಂಬುದು ಪ್ರತಿಪಕ್ಷಗಳು ಆರೋಪಿಸಿವೆ.
This is new #ISRAEL where Jews are burning their own national flags in protests against #ZIONIST ISRAELI REGIME for crimes against #Palestinians & humanity. pic.twitter.com/9CS9Jnrced
— Rizwan Malik (@Rizwanmalik49) January 8, 2023