Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ. ರೈಪಿ.ಎ. ರೈ9 Jan 2023 12:12 AM IST
share
ಓ ಮೆಣಸೇ ...

ಯಡಿಯೂರಪ್ಪ ಯಾವತ್ತೂ ಹಿಂದೆ ನಿಂತು ರಾಜಕಾರಣ ಮಾಡಿದವರಲ್ಲ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಹೇಗಿದೆಯೆಂದರೆ ಹಿಂದಾಗಲಿ ಮುಂದಾಗಲಿ ಎಲ್ಲಾದರೂ ಎದ್ದು ನಿಲ್ಲಲು ಸಾಧ್ಯವಾದರೆ ಅದು ಸೌಭಾಗ್ಯ.

ಬಿಜೆಪಿ ರಾಜ್ಯದ 150 ವಿಧಾನ ಸಭಾ ಸೀಟುಗಳನ್ನು ಖರೀದಿ ಮಾಡುವ ಲೆಕ್ಕಚಾರದಲ್ಲಿದೆ. ಖರೀದಿ ಮಾಡುವುದಾದರೆ 224 ಸೀಟುಗಳನ್ನು ಖರೀದಿಸಲಿ -ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ
ಅವರ ಖರೀದಿ ಯೋಜನೆಯ ವಿಷಯದಲ್ಲಿ ನೀವು 224 ಸೀಟುಗಳನ್ನು 150 ಸೀಟು ಎಂದು ಅಂಡರ್ ಎಸ್ಟಿಮೇಟ್ ಮಾಡಿದ್ದರೆ ಅದು ಅವರ ತಪ್ಪು ಅಲ್ಲ ತಾನೇ?

ರಾಜಕೀಯ ವಂಶ ಪಾರಂಪರ್ಯವಾಗಿ ನಡೆಸುವ ವ್ಯಾಪಾರ ಅಲ್ಲ - ಡಾ.ಸಿ.ಎಸ್.ಅಶ್ವತ್ಥನಾರಾಯಣ, ಸಚಿವ
ಹೌದು, ಅದು ವ್ಯಾಪಾರ ಅಲ್ಲವೇ ಅಲ್ಲ. ನಿಜವಾಗಿ ಅದು ವಂಶಪಾರಂಪರ್ಯವಾಗಿ ನಡೆಯುವ ದರೋಡೆ.

'ನಂದಿನಿ' ಮುಟ್ಟಿದರೆ ಬಿಜೆಪಿ ಭಸ್ಮವಾಗಲಿದೆ - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಬಿಜೆಪಿಯನ್ನು ಅಪ್ಪಿ ನಿಮ್ಮ ವಿಶ್ವಾಸಾರ್ಹತೆ ಭಸ್ಮ ಮಾಡಿಕೊಂಡ ಅನುಭವ ನೆನಪಿದೆಯಲ್ಲವೇ? ಅಂದ ಹಾಗೆ, ಇತ್ತೀಚೆಗೆ ನೀವು ಅವರನ್ನು ಬಯ್ಯುತ್ತಿರುವ ವರಸೆ ನೋಡಿದರೆ ಅವರ ಜೊತೆ ಯಾವುದೋ ದೊಡ್ಡ ವ್ಯವಹಾರ ಕುದುರಿಸಿ ಕೊಂಡಂತಿದೆಯಲ್ಲಾ!

ಗಡಿ ಕ್ಯಾತೆ ತೆಗೆಯುವ ದೇಶಗಳ ಮೇಲೆ ಆರ್ಥಿಕ, ರಾಜತಾಂತ್ರಿಕ ಹಾಗೂ ರಾಜಕೀಯ ನಿರ್ಬಂಧ ಹೇರಬೇಕು -ಎಂ.ಕೆ.ರಾಘವನ್, ಸಂಸದ
ಒಮ್ಮೆ ಬೆಳಗಾವಿಗೆ ಹೋಗಿ ಬನ್ನಿ, ಯಾವ ಗಡಿ ವಿವಾದ ಹೆಚ್ಚು ಗಂಭೀರವಾಗಿದೆ ಎಂದು ತಿಳಿಯಬಹುದು.

ಇತಿಹಾಸವೇ ಇಲ್ಲದವರು ದೇಶದ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ -ಪ್ರಕಾಶ್ ರಾಜ್, ನಟ
ಹಾಗನ್ನುವುದಕ್ಕಿಂತ ವಲಸೆ ಬಂದ ಬಳಿಕ ತಮ್ಮದೇ ಇತಿಹಾಸವನ್ನು ಅಳಿಸಿ, ಕಟ್ಟು ಕಥೆಗಳಿಗೆ ಇತಿಹಾಸದ ಮುಖವಾಡ ತೊಡಿಸಿದವರು ಎನ್ನುವುದು ಲೇಸು.

ಒಕ್ಕಲಿಗರಿಗೆ ಹಾಗೂ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರದಲ್ಲಿ ಯಾವುದೇ ಸಾಂವಿಧಾನಿಕ ತೊಡಕುಗಳಿಲ್ಲ - ಬಸವರಾಜ ಬೊಮ್ಮಾಯಿ, ಸಿಎಂ
ಸಾಂವಿಧಾನಿಕ ತೊಡಕುಗಳನ್ನೆಲ್ಲಾ ಮೆಟ್ಟಿ ನಿಲ್ಲುವ ಅಪಾರ ಸಾಮರ್ಥ್ಯ ಇರುವ ನಿಮ್ಮ ಕೇಂದ್ರ ಸರಕಾರ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸುವ ಕುರಿತು ಯಾಕೆ ಯೋಚಿಸುತ್ತಿಲ್ಲ?

ಸುಳ್ಳು ಹೇಳುವುದು ಹಾಗೂ ಮೋಸ ಮಾಡುವ ಕುರಿತು ಕಾಂಗ್ರೆಸ್ ಪೇಟೆಂಟ್ ಪಡೆದುಕೊಂಡಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಆ ನಿಮ್ಮ ಚಿರಾಸ್ತಿಯನ್ನು ನಿಮ್ಮ ಕೈಯಿಂದ ಕಿತ್ತುಕೊಳ್ಳುವ ತಾಕತ್ತು ಪಾಪ ಅವರಲ್ಲಿ ಎಲ್ಲಿದೆ?

ಡಿ.31ರಂದು ರಾಜ್ಯಾದ್ಯಂತ ಪಾನಪ್ರಿಯರು ಒಂದೇ ದಿನ 183 ಕೋಟಿ ರೂ. ವೌಲ್ಯದ ಮದ್ಯ ಖರೀದಿಸುವ ಮೂಲಕ ನಶೆಯಲ್ಲಿ ಮಿಂದೆದ್ದಿದ್ದಾರೆ -ವರದಿ
ಅವರ ಪಾಡು ಒಂದೆಡೆಯಾದರೆ ವರ್ಷವಿಡೀ ದ್ವೇಷದ ಅಮಲಲ್ಲಿ ಮುಳುಗಿದ್ದು, ಯಾವ ಕಾರಣಕ್ಕೂ ಹೊರಬರಲು ಒಲ್ಲದವರ ಭಯಾನಕ ಪಾಡು ಇನ್ನೊಂದೆಡೆ.

ಬಿಜೆಪಿ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಿದರೆ, ಕಾಂಗ್ರೆಸ್ ಜನರ ಬದುಕಿನ ಮೇಲೆ ಹೋಗುತ್ತದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಬದುಕಿನ ಮೇಲಿಂದ ನಿರ್ಜೀವ ಗಾಳಿಪಟದಂತೆ ಹಾದು ಹೋದರೆ ಜನರಿಗೇನು ಲಾಭ?

ಕುಟುಂಬ ರಾಜಕೀಯ ಪೋಷಿಸುವ ಪಕ್ಷಗಳನ್ನು ಜನರು ಅಧಿಕಾರದಿಂದ ದೂರ ಇಡಬೇಕು - ಅಮಿತ್ ಶಾ, ಕೇಂದ್ರ ಸಚಿವ
ಅಧಿಕಾರದಲ್ಲಿರುವ ಪಕ್ಷ ತನ್ನೊಳಗೆ ಈ ಕಾರ್ಯಾಚರಣೆಯನ್ನು ಆರಂಭಿಸಿ ಮಾದರಿಯಾಗಬಹುದಲ್ಲವೇ?

ಕಾಂಗ್ರೆಸ್ ಅಡಿಕೆ ಬೆಳೆಗಾರರ ಪರ ಹೋರಾಟ ಮಾಡುವ ನಾಟಕವಾಡುತ್ತಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಅವರು ಅಷ್ಟನ್ನಾದರೂ ಮಾಡುತ್ತಾರೆ. ನೀವು ಮಾತ್ರ ಲವ್ ಜಿಹಾದ್ ಪರ ಪ್ರಚಾರದಲ್ಲೇ ನಿರತರಾಗಿರುತ್ತೀರಿ.

ಒಂದೇ ತಟ್ಟೆ (ಮೀಸಲಾತಿ) ಇರುವುದರಿಂದ ಎಲ್ಲರೂ ಅದರಲ್ಲೇ ಹಂಚಿಕೊಂಡು ತಿನ್ನಬೇಕು - ಮುರುಗೇಶ್ ನಿರಾಣಿ, ಸಚಿವ
ನೀವು ಹಂಚಿಕೊಂಡು ತಿನ್ನುವ ಮಾತನಾಡಿದರೆ, ಜನರು, ನೀವು ನಲವತ್ತು ಪರ್ಸೆಂಟ್ ಕುರಿತು ಏನೋ ಹೇಳುತ್ತಿದ್ದೀರಿ ಎಂದುಕೊಳ್ಳುತ್ತಾರೆ.

ನೋಟು ಅಮಾನ್ಯೀಕರಣದ ಕುರಿತ ಭಿನ್ನ ತೀರ್ಪು ಸರಕಾರಕ್ಕೆ ನ್ಯಾಯಾಂಗ ಕೊಟ್ಟಿರುವ ಏಟು - ಪಿ.ಚಿದಂಬರಂ, ಕಾಂಗ್ರೆಸ್ ನಾಯಕ
ಒಬ್ಬರು ಏಟು ಕೊಟ್ಟಿದ್ದರೆ ಇನ್ನು ನಾಲ್ಕು ಮಂದಿ ಬೆನ್ನು ತಟ್ಟಿದ್ದಾರಲ್ಲಾ?

ಒಂದು ವರ್ಷದೊಳಗಾಗಿ ಕಳಸಾ -ಬಂಡೂರಿ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ - ಗೋವಿಂದ ಕಾರಜೋಳ, ಸಚಿವ
ನಿಮ್ಮ ಹೆಸರು ಬದಲಾದರೆ ಯಾರಿಗೇನು ಲಾಭ?

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ನನ್ನ ಅಭ್ಯಂತರವಿಲ್ಲ - ನಿತೀಶ್ ಕುಮಾರ್, ಬಿಹಾರ ಸಿಎಂ
ಅಂತಹ ಸಂದರ್ಭ ಬರುವುದಿಲ್ಲ ಎಂದು ಅಷ್ಟು ಗಟ್ಟಿ ವಿಶ್ವಾಸವೇ?

ಕನ್ನಡ ಭಾಷೆ ಮತ್ತು ಕನ್ನಡಿಗರ ರಕ್ಷಣೆಗೆ ರೂಪಿಸಿರುವ 'ಸಮಗ್ರ ಕನ್ನಡ ಭಾಷಾ ವಿಧೇಯಕ'ವನ್ನುರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕು- ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಸಂಸ್ಕೃತವನ್ನು ದೇಶದ ಏಕಮಾತ್ರ ಸಕ್ರಮ ಭಾಷೆ ಎಂದು ಘೋಷಿಸುವ ಕಾರ್ಯಕ್ರಮ ಆ ಬಳಿಕವೇ?

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ - ಕೆ.ಎಸ್.ಈಶ್ವರಪ್ಪ, ಶಾಸಕ
ಸಿದ್ದರಾಮಯ್ಯನವರನ್ನು ಗೆಲ್ಲಿಸುವ ಬಗ್ಗೆ ನಿಮಗೇಕೆ ಅಷ್ಟೊಂದು ಉತ್ಸಾಹ?

ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ನೇತೃತ್ವದ ಡಬಲ್ ಇಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಿದೆ - ನಿರ್ಮಲ ಕುಮಾರ್ ಸುರಾಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಗುಜರಿಯಾದ ಇಂಜಿನ್‌ಗಳು ಎರಡಿದ್ದರೂ ನೂರಿದ್ದರೂ ವೇಗ ಶೂನ್ಯವಾಗಿರುತ್ತದೆ.

ರಾಜಕೀಯ ನಿವೃತ್ತಿಯಾಗುತ್ತಿದ್ದೇನೆ ಎಂದರೆ (ರಾಜಕೀಯ) ಸನ್ಯಾಸ ಪಡೆಯುತ್ತಿದ್ದೇನೆ ಎಂದರ್ಥವಲ್ಲ - ಎಸ್.ಎಂ.ಕೃಷ್ಣ, ಮಾಜಿ ಸಿಎಂ
ಹಾಗೆಂದರೆ, ಸದ್ಯ ನೀವು ಭಾಷಾ ಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದೀರಿ ಎಂದರ್ಥವೇ?

ಕೇಂದ್ರ ಗೃಹ ಸಚಿವ ಅಮಿತ್ ಶಾ ದೇವೇಗೌಡರ ಉಗುರಿಗೂ ಸಮ ಅಲ್ಲ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಒಮ್ಮೆ ಅವರ ಕೋರೆ ಹಲ್ಲುಗಳ ಅಳತೆ ತೆಗೆದು ನೋಡಿ .

ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳು ಪ್ರಭಾವ ಬೀರುವುದಿಲ್ಲ - ಶ್ರೀರಾಮುಲು, ಸಚಿವ
ಎಲ್ಲ ಚುನಾವಣೆಗಳಲ್ಲೂ ಹಣದ ಪ್ರಭಾವದ ಮುಂದೆ ಯಾವ ಪ್ರಭಾವವೂ ಇಲ್ಲ ಎನ್ನುವುದು ಗೊತ್ತು ಬಿಡಿ.

ರಾಹುಲ್ ಗಾಂಧಿಯ ಇಮೇಜ್ ಹಾಳು ಮಾಡುವುದಕ್ಕೆ ಮೋದಿ ಸರಕಾರ ಯಾವುದೇ ಕುತಂತ್ರ ರೂಪಿಸಿದರೂ ಅದು ವ್ಯರ್ಥ - ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ
ಕಾಂಗ್ರೆಸ್ ಇಮೇಜ್ ಹೆಚ್ಚಿಸುವುದಕ್ಕೆ ರಾಹುಲ್ ಮಾಡುವ ತಂತ್ರದ ಬಗ್ಗೆಯೂ ಇದೇ ಅಭಿಪ್ರಾಯ ಇದೆ.

ನಾನೀಗ ಎಕ್ಸ್‌ಪರ್ಟ್ ಗೃಹ ಸಚಿವ - ಆರಗ ಜ್ಞಾನೇಂದ್ರ, ಸಚಿವ
ನವ ಗ್ರಹಗಳು ಕೂಡಿ ಬಂದಿದೆ ಎಂದು ಜೋತಿಷಿಗಳು ಹೇಳಿರಬೇಕು.

ಲವ್ ಮಾಡದ ನಳಿನ್ ಕುಮಾರ್ ಕಟೀಲಿಗೆ ಯಾವುದೂ ಅರ್ಥವಾಗದು - ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ದಕ್ಷಿಣ ಕನ್ನಡದಲ್ಲಿ ಹರಿದಾಡುತ್ತಿರುವ ಹೆಣ್ಣು ಧ್ವನಿಯ ಆಡಿಯೊಗಳು ನಿಮ್ಮನ್ನು ಇನ್ನೂ ತಲುಪಿದಂತೆ ಇಲ್ಲ.

ಭಾರತ ಯುದ್ಧದಿಂದ ಲಾಭಗಳಿಸಲು ಯತ್ನಿಸುವ ದೇಶವಲ್ಲ - ಎಸ್.ಜೈಶಂಕರ್, ಕೇಂದ್ರ ಸಚಿವ
ಅಮೆರಿಕಕ್ಕೆ ಲಾಭ ಮಾಡಿ ಕೊಡುವ ದೇಶ ಎಂದರೆ ಚೆನ್ನಾಗಿರುತ್ತದೆ.

share
ಪಿ.ಎ. ರೈ
ಪಿ.ಎ. ರೈ
Next Story
X