ಮಂಗಳೂರು: ಪೌರ ಕಾರ್ಮಿಕರ ರ್ಯಾಲಿ

ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಸೋಮವಾರ ಮುಂಜಾನೆಯಿಂದಲೇ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿ ಕೂಳೂರು ಗೋಲ್ಡ್ ಪಿಂಚ್ ಮೈದಾನದ ಮುಂದೆ ಪ್ರತಿಭಟಿಸಿದ್ದರೆ, ಅಪರಾಹ್ನ ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಮಂಗಳೂರು ಮಿನಿ ವಿಧಾನ ಸೌಧದವರೆಗೆ ರ್ಯಾಲಿ ನಡೆಸಿದರು.
ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂಬಿ ನಾಗಣ್ಣಗೌಡ, ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ಕೆ.ನಾರಾಯಣ ಶೆಟ್ಟಿ, ಕರ್ನಾಟಕ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಎಂ.ಚಂದ್ರು, ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪಕೆರೆಕಾಡು, ಮಂಗಳೂರು ಸಪಾಯಿ ಕರ್ಮಚಾರಿಗಳ ಸಂಘದ ಮುಖಂಡರಾದ ಅಶೋಕ್ ಕೊಂಚಾಡಿ, ದಿನೇಶ್ ಕುಲಾಲ್, ಚೆನ್ನಕೇಶವ, ಸುಧೀರ್, ಸಿದ್ದರೂಡ, ಪೂವಪ್ಪರ್ಯಾಲಿಯ ನೇತೃತ್ವ ವಹಿಸಿದ್ದರು.
ಮನೆ, ವಾಣಿಜ್ಯ ಮತ್ತು ವಸತಿ ಸಂಕೀರ್ಣ, ಅಂಗಡಿ, ರಸ್ತೆಬದಿಗಳಲ್ಲಿ ರಾಶಿ ಹಾಕಲಾದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಸಫಾಯಿ ಕರ್ಮಚಾರಿಗಳ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಸೋಮವಾರ ಮುಷ್ಕರ ಹೂಡಿ ಪ್ರತಿಭಟನೆ-ರ್ಯಾಲಿಯಲ್ಲಿ ಪಾಲ್ಗೊಂಡ ಕಾರಣ ಅಲ್ಲಲ್ಲಿ ತ್ಯಾಜ್ಯದ ರಾಶಿ ಎದ್ದು ಕಂಡಿತು. ಕೆಲವು ಕಡೆ ಮನೆ ಮುಂದಿಟ್ಟಿದ್ದ ತ್ಯಾಜ್ಯದ ಚೀಲಗಳನ್ನು ನಾಯಿ, ಬೆಕ್ಕು ಎಳೆದಾಡಿ ಪರಿಸರ ಮಾಲಿನ್ಯ ಮಾಡಿದೆ.
.jpg)





