Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2022ರ ವೇಳೆಗೆ ಎಲ್ಲರಿಗೂ ವಸತಿ...

2022ರ ವೇಳೆಗೆ ಎಲ್ಲರಿಗೂ ವಸತಿ ದೊರಕಲಿದೆಯೇ? ವಾಸ್ತವ ಬೇರೆಯದನ್ನೇ ಹೇಳುತ್ತಿದೆ

ಸುಬೋಧ್ ವರ್ಮಾ (www.newsclick.in)ಸುಬೋಧ್ ವರ್ಮಾ (www.newsclick.in)9 Jan 2023 8:35 PM IST
share
2022ರ ವೇಳೆಗೆ ಎಲ್ಲರಿಗೂ ವಸತಿ ದೊರಕಲಿದೆಯೇ? ವಾಸ್ತವ ಬೇರೆಯದನ್ನೇ ಹೇಳುತ್ತಿದೆ

ಭಾರತದ ಸ್ವಾತಂತ್ರದ 75ನೇ ವರ್ಷ,2022ರ ವೇಳೆಗೆ ಎಲ್ಲ ಭಾರತೀಯರು ತಮ್ಮದೇ ಆದ ಮನೆಗಳನ್ನು ಹೊಂದಿರಲಿದ್ದಾರೆ; ಇದು ಪ್ರಧಾನಿ ನರೇಂದ್ರ ಮೋದಿಯವರು ಈ ಎಲ್ಲ ವರ್ಷಗಳಲ್ಲಿ ಪದೇ ಪದೇ ಉಚ್ಚರಿಸುತ್ತಲೇ ಬಂದಿರುವ ಅವರ ನೆಚ್ಚಿನ ಭರವಸೆಗಳಲ್ಲೊಂದು. 2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನವೇ ಅವರು ಈ ಭರವಸೆಯನ್ನು ನೀಡಿದ್ದರು ಮತ್ತು ನಂತರದ ವರ್ಷಗಳಲ್ಲಿ ಆಗಾಗ್ಗೆ ಅದಕ್ಕೆ ಒತ್ತು ನೀಡುತ್ತಲೇ ಇದ್ದಾರೆ. ಈ ಗುರಿಯನ್ನು ಸಾಧಿಸಲು ಬಿಜೆಪಿ ನೇತೃತ್ವದ ಸರಕಾರವು ಹೆಚ್ಚಿನ ಹಣ ಮತ್ತು ಹೆಚ್ಚಿನ ರಾಜಕೀಯ ಬೆಂಬಲದೊಂದಿಗೆ ಹಿಂದಿನ ಇಂದಿರಾ ಆವಾಸ್ ಯೋಜನೆಯನ್ನು ಪರಿಷ್ಕರಿಸಿದೆ. ಗ್ರಾಮೀಣ ಮತ್ತು ನಗರ,ಹೀಗೆ ಎರಡು ಭಾಗಗಳೊಂದಿಗೆ ಅದಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನಾ (ಪಿಎಂಎವೈ) ಎಂಬ ಹೊಸ ಹೆಸರನ್ನು ನೀಡಲಾಗಿದೆ.

ಯೋಜನೆಯ ಅಧಿಕೃತ ವೆಬ್ಸೈಟ್ ಪ್ರಕಾರ 2023,ಜ.6ಕ್ಕೆ ಇದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ 2.94 ಕೋ.ಮನೆಗಳ ನಿರ್ಮಾಣ ಗುರಿಯಲ್ಲಿ ಶೇ.72ರಷ್ಟನ್ನು ಸಾಧಿಸಲಾಗಿದೆ,ಅಂದರೆ 2.1 ಕೋ.ಮನೆಗಳನ್ನು ನಿರ್ಮಿಸಲಾಗಿದ್ದು,ಇನ್ನೂ 84 ಲ.ಮನೆಗಳನ್ನು ಪೂರ್ಣಗೊಳಿಸಬೇಕಿದೆ. ನಗರ ಪ್ರದೇಶಗಳಲ್ಲಿ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು,ಕೇವಲ ಶೇ.51ರಷ್ಟು ಗುರಿ ಸಾಧನೆಯಾಗಿದೆ. 2022,ಡಿ.12ರಂದು ರಾಜ್ಯಸಭೆಯಲ್ಲಿ ಸರಕಾರವು ನೀಡಿರುವ ಉತ್ತರದಂತೆ ಮಂಜೂರಾಗಿದ್ದ 1.25 ಕೋ.ಮನೆಗಳ ಪೈಕಿ 61.2 ಲ.ಮನೆಗಳು ವಾಸ್ತವದಲ್ಲಿ ಪೂರ್ಣಗೊಂಡಿವೆ. ಅಂದರೆ ಇನ್ನೂ 59 ಲ.ಮನೆಗಳು ಪೂರ್ಣಗೊಳ್ಳಬೇಕಿವೆ. ಯೋಜನೆಯು ಗಡುವು ಮೀರುತ್ತಿದೆ ಮತ್ತು ಗುರಿ ಸಾಧನೆಯು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅರಿತ ಸರಕಾರವು 2024ರವರೆಗೆ ಯೋಜನೆಯನ್ನು ವಿಸ್ತರಿಸಿದೆ. ಫೆ.2022ರ ಸಂಪುಟ ಸಭೆಯಲ್ಲಿ ಪಿಎಂಎಐ-ಗ್ರಾಮೀಣವನ್ನು ಮಾ.2024 ಮತ್ತು ಪಿಎಂಎವೈ-ನಗರವನ್ನು ಡಿ.2024ರವರೆಗೆ ವಿಸ್ತರಿಸಲಾಗಿದೆ. 2022ರ ವೇಳೆಗೆ ಅಗತ್ಯವುಳ್ಳ ಎಲ್ಲ ಕುಟುಂಬಗಳಿಗೆ ಮನೆಗಳನ್ನು ಒದಗಿಸುವ ಭರವಸೆ ಹುಸಿಯಾದಂತೆ ಕಾಣುತ್ತಿದೆ.

ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶಗಳನ್ನು ಹೊರತುಪಡಿಸಿ ಪಿಎಂಎವೈ ಯೋಜನೆಯಡಿ ಮನೆಗಳ ನಿರ್ಮಾಣ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು 60:40ರ ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಅನುಪಾತವು 90:10 ಆಗಿದೆ. ಪಿಎಂಎವೈ-ಗ್ರಾಮೀಣವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಿಎಂಎವೈ-ನಗರ ಯೋಜನೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ವಹಿಸುತ್ತಿವೆ.

ಎಲ್ಲರಿಗೂ ಮನೆಗಳನ್ನು ಒದಗಿಸುವಲ್ಲಿ ನಿಜವಾದ ಕೊರತೆಯು ಅಧಿಕೃತ ಅಂಕಿಅಂಶಗಳು ತೋರಿಸುತ್ತಿರುವುದರಿಂದ ಅಧಿಕವಾಗಿದೆ,ಏಕೆಂದರೆ ವಸತಿ ಅಗತ್ಯವನ್ನು 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿಯಲ್ಲಿನ ವಸತಿ ಕೊರತೆಯ ದತ್ತಾಂಶಗಳ ಆಧಾರದಲ್ಲಿ ನಿರ್ಧರಿಸಲಾಗಿತ್ತು. ಅದರ ನಂತರ ಹಲವಾರು ವರ್ಷಗಳು ಸರಿದುಹೋಗಿವೆ ಮತ್ತು ವಸತಿ ಅಭಾವವೂ ಹೆಚ್ಚಿದೆ. ಇಂಡಿಯನ್ ಕೌನ್ಸಿಲ್ ಫಾರ್ ರೀಸರ್ಚ್ ಆನ್ ಇಂಟರ್ನ್ಯಾಷನಲ್ ಇಕನಾಮಿಕ್ ರಿಲೇಷನ್ಸ್ನ ಅಧ್ಯಯನದಂತೆ 2012ರಲ್ಲಿ 1.88 ಕೋ.ಯಷ್ಟಿದ್ದ ನಗರ ವಸತಿ ಕೊರತೆಯು 2018ರ ವೇಳೆಗೆ 2.9 ಕೋ.ಗೆ ಏರಿದೆ,ಅಂದರೆ ಶೇ.54ರಷ್ಟು ಹೆಚ್ಚಳವಾಗಿದೆ.

ಬಿಜೆಪಿ ಆಡಳಿತದ ರಾಜ್ಯಗಳೂ ಸೇರಿದಂತೆ ಹಲವಾರು ರಾಜ್ಯಗಳು ಯೋಜನೆಯ ಅನುಷ್ಠಾನದಲ್ಲಿ ಹಿಂದುಳಿದಿವೆ. ಅಧಿಕೃತ ಪಿಎಂಎವೈ-ಗ್ರಾಮೀಣ ವೆಬ್ ಸೈಟ್ ನಲ್ಲಿ ಲಭ್ಯ ಇತ್ತೀಚಿನ ದತ್ತಾಂಶಗಳಂತೆ ಅಭಿವೃದ್ಧಿಯಲ್ಲಿ ಹಿಂದಿರುವ ಈಶಾನ್ಯ ರಾಜ್ಯಗಳು ಯೋಜನೆಗಾಗಿ ಕೇಂದ್ರದಿಂದ ಶೇ.90ರಷ್ಟು ಹಣವನ್ನು ಪಡೆಯುತ್ತವೆ ಮತ್ತು ಈ ಪೈಕಿ ಹೆಚ್ಚಿನವು ಬಿಜೆಪಿ ಆಡಳಿತವನ್ನು ಹೊಂದಿವೆ,ಆದರೂ ವಸತಿಗಳನ್ನು ಒದಗಿಸುವಲ್ಲಿ ವಿಶೇಷವಾಗಿ ಹಿಂದುಳಿದಿರುವಂತೆ ಕಾಣುತ್ತಿದೆ. ಸಿಕ್ಕಿಂ (ಶೇ.78) ಮತ್ತು ತ್ರಿಪುರಾ (ಶೇ.67) ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದರೆ ಇತರ ಆರು ರಾಜ್ಯಗಳ ಪೈಕಿ ಮೇಘಾಲಯ (ಶೇ.43)ವನ್ನು ಬಿಟ್ಟರೆ ಇತರ ರಾಜ್ಯಗಳು ಶೇ.40ನ್ನು ದಾಟಿಲ್ಲ.

ಪ್ರಮುಖ ರಾಜ್ಯಗಳ ಪೈಕಿ ತೆಲಂಗಾಣವು ಯೋಜನೆಯನ್ನೇ ಅನುಷ್ಠಾನಿಸುತ್ತಿಲ್ಲ. ಆಂಧ್ರಪ್ರದೇಶ ಶೇ.18.3ರಷ್ಟು ಮತ್ತು ಗೋವಾ ಕೇವಲ ಶೇ.8ರಷ್ಟು ಮನೆಗಳನ್ನು ನಿರ್ಮಿಸಿವೆ. ಬಿಹಾರ,ರಾಜಸ್ಥಾನ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ಶೇ.80ಕ್ಕೂ ಅಧಿಕ ಗುರಿಸಾಧನೆಯನ್ನು ದಾಖಲಿಸಿದ್ದರೆ,ಉತ್ತರ ಪ್ರದೇಶ,ಹಿಮಾಚಲ ಪ್ರದೇಶ ಮತ್ತು ಪ.ಬಂಗಾಳ ಶೇ.70ರಿಂದ ಶೇ.80ರಷ್ಟು ಗುರಿಯನ್ನು ಸಾಧಿಸಿವೆ. ಇತರ ರಾಜ್ಯಗಳು ರಾಷ್ಟ್ರಮಟ್ಟದಲ್ಲಿ ಸರಾಸರಿ ಪೂರ್ಣಗೊಳಿಸುವಿಕೆ ದರ ಶೇ.72ಕ್ಕಿಂತ ಕೆಳಗೆಯೇ ಇವೆ.
ರಾಜ್ಯಗಳ ಅಸಮರ್ಥತೆ ಪ್ರಾಯಶಃ ಯೋಜನೆಯ ವಿಳಂಬಕ್ಕೆ ಕಾರಣ ಎನ್ನುವುದನ್ನು ಕೇಂದ್ರದ ಪ್ರವೃತ್ತಿಯು ಸೂಚಿಸುತ್ತಿದೆ. ಆದರೆ ಇದು ನಿಜವಲ್ಲ,ಏಕೆಂದರೆ ಹಲವಾರು ‘ಡಬಲ್ ಇಂಜಿನ್ ’ ರಾಜ್ಯ ಸರಾಕಾರಗಳೂ ಅನುಷ್ಠಾನದಲ್ಲಿ ಹಿಂದುಳಿದಿವೆ.

ವಾಸ್ತವದಲ್ಲಿ ಹಲವಾರು ರಾಜ್ಯ ಸರಕಾರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ತಮ್ಮದೇ ಆದ ರಾಜ್ಯಮಟ್ಟದ ವಸತಿ ಯೋಜನೆಗಳನ್ನು ಹೊಂದಿವೆ ಮತ್ತು ಅವು ಸಮಾನಾಂತರವಾಗಿ ಮನೆಗಳನ್ನು ಒದಗಿಸುತ್ತಿವೆ. ಕೇರಳದಂತಹ ಕೆಲವು ರಾಜ್ಯಗಳಲ್ಲಿ ಉತ್ತಮ ಮನೆಗಳ ಅಗತ್ಯವಿರುವ ಕುಟುಂಬಗಳ ಸಂಖ್ಯೆ ತುಂಬ ಕಡಿಮೆಯಿದೆ,ಕೇವಲ 42,212. ಈ ಪೈಕಿ 25,000ಕ್ಕೂ ಅಧಿಕ ಮನೆಗಳು ನಿರ್ಮಾಣಗೊಂಡಿವೆ. ಹೀಗಾಗಿ ಸಾಧಿಸಲಾದ ಗುರಿಯ ಪ್ರಮಾಣವು ತಳಮಟ್ಟದ ಪರಿಸ್ಥಿತಿಯನ್ನು ಸೂಚಿಸದಿರಬಹುದು.
ರಾಜ್ಯಗಳು ಶೇ.40ರಷ್ಟು ವೆಚ್ಚವನ್ನು ಹಂಚಿಕೊಳ್ಳಬೇಕಿರುವುದು ಸಹ ರಾಜ್ಯ ಸರಕಾರಗಳನ್ನು ವಿಶೇಷವಾಗಿ ಸಾಂಕ್ರಾಮಿಕದ ಸಂದರ್ಭದಲ್ಲಿ ಮತ್ತು ಸಾಮಾನ್ಯವಾಗಿ ಅವು ಜಿಎಸ್ಟಿ ಆದಾಯದಿಂದ ವಂಚಿತಗೊಂಡ ಬಳಿಕ ಸಂಕಷ್ಟದಲ್ಲಿ ಸಿಲುಕಿಸಿದೆ. ತಳಮಟ್ಟದಲ್ಲಿ ಯೋಜನೆಯ ಅನುಷ್ಠಾನದ ಹೊಣೆಯನ್ನು ಹೊತ್ತಿರುವ ರಾಜ್ಯ ಸರಕಾರಗಳು ಭೂ ಸಂಬಂಧಿತ ವಿವಾದಗಳು,ಇಲೆಕ್ಟ್ರಾನಿಕ್ ವಹಿವಾಟು ಸಮಸ್ಯೆಗಳು ಮತ್ತು ಹಣ ವರ್ಗಾವಣೆಯಲ್ಲಿ ವಿಳಂಬಗಳನ್ನು ಎದುರಿಸಬೇಕಾಗಿತ್ತು.
ಇವೆಲ್ಲದರ ಅರ್ಥವೇನೆಂದರೆ ಕೇಂದ್ರ ಸರಕಾರವು ಆಗಾಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ದಕ್ಷತೆ ಮತ್ತು ದೃಢಸಂಕಲ್ಪ ಅತ್ಯಂತ ಜನಪ್ರಿಯವಾಗಿರುವ ಯೋಜನೆಯಲ್ಲಿಯೂ ನಿಜಕ್ಕೂ ಪರಿಣಾಮಕಾರಿ ಮತ್ತು ಕಾರ್ಯಸಾಧ್ಯವಾಗಿಲ್ಲ. ಇದು ನಿರ್ಲಕ್ಷ ಮತ್ತು ವಸತಿ ಸೌಲಭ್ಯದ ಅಭಾವಕ್ಕೆ ಸಂಬಂಧಿಸಿದಂತೆ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಕೃಪೆ:newsclick.in

share
ಸುಬೋಧ್ ವರ್ಮಾ (www.newsclick.in)
ಸುಬೋಧ್ ವರ್ಮಾ (www.newsclick.in)
Next Story
X