ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸುನಾಮಿ ಮುನ್ನೆಚ್ಚರಿಕೆ
ಇಂಡೋನೇಷ್ಯಾ: ಇಂಡೋನೇಷ್ಯಾದ ತನಿಂಬರ್ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.7ರಷ್ಟಿತ್ತು ಎಂದು ಯೂರೋಪಿಯನ್ ಮೆಡಿಟರೇನಿಯನ್ ಸಿಸ್ಮೊಲಾಜಿಕಲ್ ಸೆಂಟರ್ (ಇಎಂಎಸ್‍ಸಿ) ಹೇಳಿದೆ.
ಭೂಮಿಯ ಮೇಲ್ಮೈನಿಂದ 97 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಇಎಂಎಸ್‍ಸಿ ಹೇಳಿದೆ. ಪ್ರಬಲ ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾ ಸರ್ಕಾರ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಿದೆ. ಆದರೆ ಸಮುದ್ರ ಮಟ್ಟದಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಕಂಡುಬರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯನ್ನು ವಾಪಾಸು ಪಡೆಯಲಾಗಿದೆ.
ಭೂಕಂಪದ ಬಳಿಕ ಲಘು ಕಂಪನಗಳು ಉತ್ತರ ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ಅನುಭವಕ್ಕೆ ಬಂದಿವೆ. ಈ ವಿಕೋಪದಿಂದ ಕಟ್ಟಡಗಳಿಗೆ ಲಘು ಅಥವಾ ಮಧ್ಯಮ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಇಂಡೋನೇಷ್ಯಾದ ವಿಕೋಪ ನಿರ್ವಹಣೆ ಏಜೆನ್ಸಿ ಪ್ರಕಟಿಸಿದೆ.
Next Story