ಮೂಡುಬಿದಿರೆ: ಮರ್ಹೂಂ ನೌಷಾದ್ ಹಾಜಿ ಅನುಸ್ಮರಣೆ, ದುಆ ಮಜ್ಲಿಸ್

ಮೂಡುಬಿದಿರೆ: ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ಸ್ಥಾಪಕ ಸದಸ್ಯ ಹಾಗೂ ಜೊತೆ ಕಾರ್ಯದರ್ಶಿಯಾಗಿದ್ದ, ಸಾಮಾಜಿಕ ಕಾರ್ಯಕರ್ತ ನೌಶಾದ್ ಹಾಜಿಯವರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಬಹ್ರುನ್ನೂರ್ ಜುಮಾ ಮಸೀದಿಯಲ್ಲಿ ನಡೆಯಿತು.
ಮರ್ಹೂಂ ನೌಷಾದ್ ಹಾಜಿಯವರು ‘ನಂಡೆ ಪೆಂಳ್’ ಅಭಿಯಾನ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಗಳು ನಮಗೆಲ್ಲರಿಗೂ ಮಾದರಿ ಎಂಬುದಾಗಿ ಸ್ಮರಿಸಲಾಯಿತು.
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ದಾರುಸ್ಸಲಾಂ ಬೆಳ್ತಂಗಡಿ ಸಂಸ್ಥೆಯ ಅಧ್ಯಕ್ಷ ಸೈಯದ್ ಝೈನುಲ್ ಆಬೀದೀನ್ ಜಿಫ್ರಿ ತಂಳ್, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಅವರು ನೌಶಾದ್ ಹಾಜಿಯ ಒಡನಾಟವನ್ನು ಸ್ಮರಿಸಿದರು.
ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ಸ್ವಾಗತಿಸಿದರು. ದಾರುನ್ನೂರ್ ಪದವಿ ವಿದ್ಯಾರ್ಥಿಗಳಾದ ಹರ್ಷದ್ ಮತ್ತು ರವೂಫ್ ಅನುಸ್ಮರಣಾ ಗಾನವನ್ನು ಹಾಡಿದರು. ದಾರುನ್ನೂರ್ ವಿದ್ಯಾರ್ಥಿ ಸಂಘಟನೆ ಹೊರತಂದ ‘ಸಮಾಜ ಕಂಡ ಸಮಂಜಸ ನಾಯಕ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಸಮಸ್ತ ಕೇಂದ್ರ ಮುಶಾವರ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಉಸ್ಮಾನ್ ಫೈಝಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಹಾಜಿ, ವಾಗ್ಮಿ ಸಿರಾಜುದ್ದೀನ್ ಕಾಸಿಮಿ, ದಾರುಸ್ಸಲಾಮ್ ಸಂಸ್ಥೆಯ ಅಧ್ಯಕ್ಷ ಸೈಯದ್ ಝೈನುಲ್ ಆಬೀದೀನ್ ಜಿಫ್ರಿ ತಂಳ್, ವಕ್ಫ್ ಸಲಹಾ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷರಾದ ಎ.ಕೆ ಜಮಾಲ್, ಅಬ್ದುಲ್ ಲತೀಫ್ ಗುರುಪುರ, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಕ್ರಂ ಅಲಿ ತಂಳ್, ಹುಸೈನ್ ದಾರಿಮಿ ರೇಂಜಲಾಡಿ, ಆಸಿಫ್ ಸೂರಲ್ಪಾಡಿ, ದಾರುಸ್ಸಲಾಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ದಾರುನ್ನೂರ್ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಕೋಡಿಜಾಲ್ ಇಬ್ರಾಹಿಂ ಹಾಜಿ, ಹಾಸ್ಕೋ ಅಬ್ದುಲ್ ರಹಿಮಾನ್ ಹಾಜಿ, ಶಾಹುಲ್ ಹಮೀದ್ ಮೆಟ್ರೋ ಹಾಜಿ, ಜೊತೆ ಕಾರ್ಯದರ್ಶಿಗಳಾದ ಅದ್ದು ಹಾಜಿ, ಮುಹಮ್ಮದ್ ಬಪ್ಪಳಿಗೆ, ಲೆಕ್ಕಪರಿಶೋಧಕ ಅಬುಶಾಲಿ ಹಾಸ್ಕೋ, ಸದಸ್ಯರಾದ ಮುಹಮ್ಮದ್ ಹನೀಫ್ ಹಾಜಿ, ಬೊಳ್ಳೂರ್ ಇದ್ದಿನಬ್ಬ ಹಾಜಿ, ಅಹ್ಮದ್ ಹುಸೇನ್, ಸಲಾಂ ಬೂಟ್ ಬಝಾರ್, ಅಝೀಝ್ ಮಾಲಿಕ್, ನಾಝಿಮುದ್ದೀನ್ ಅಂಗರಕರಿಯ, ಬಲ್ಲೆಚಾರ್ ಮುಹಮ್ಮದ್, ಅಬ್ದುಲ್ ಜಲೀಲ್, ಹಸನ್ ಕುಟ್ಟಿ, ಶಾಫಿ ಮೂಲರಪಟ್ನ, ರಿಯಾಝ್ ಕಣ್ಣೂರ್, ಝೈನುಲ್ ಅಬಿದ್ ಅಬುಶಾಲಿ, ಶಾಕಿರ್ ಫರಂಗಿಪೇಟೆ, ಆಸಿಫ್ ಫರಂಗಿಪೇಟೆ, ನೌಷಾದ್ ಹಾಜಿಯ ಸಹೋದರರಾದ ಮುಹಮ್ಮದ್, ಅಬ್ದುಲ್ ಸತ್ತಾರ್ ಕೃಷ್ಣಾಪುರ, ಶಂಸುದ್ದೀನ್ ಸೂರಲ್ಪಾಡಿ, ಮುಖ್ಯ ಶಿಕ್ಷಕ ಹುಸೈನ್ ರಹ್ಮಾನಿ, ಪ್ರಾಂಶುಪಾಲ ಅಮೀನ್ ಹುದವಿ, ಉಪ ಪ್ರಾಂಶುಪಾಲ ತಾಹಾ ಹುದವಿ, ವ್ಯವಸ್ಥಾಪಕ ಅಬ್ದುಲ್ ಹಕೀಮ್, ಪಿಟಿಎ ಅಧ್ಯಕ್ಷ ಫಕೀರಬ್ಬ ಮಾಸ್ಟರ್, ಕಾರ್ಯದರ್ಶಿ ನಝೀರ್ ಅಝ್ಹರಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಹಾಜಿ ಕಾರ್ಯಕ್ರಮ ನಿರೂಪಿಸಿದರು.