ಸಾರಾ ಅಬೂಬಕ್ಕರ್ ಕರಾವಳಿಯ ವೈಚಾರಿಕ ಪ್ರಜ್ಞೆಯಾಗಿದ್ದರು: ಡಾ. ಧನಂಜಯ ಕುಂಬ್ಳೆ

ಕೊಣಾಜೆ: ಚಂದ್ರಗಿರಿಯ ತೀರದಲ್ಲಿ ಹುಟ್ಟಿ ಕರಾವಳಿಯ ವೈಚಾರಿಕ ಚಿಂತನೆಗೆ ತನ್ನ ಕಾದಂಬರಿಗಳ ಮೂಲಕ ಹೊಸ ಚೈತನ್ಯವನ್ನು ತುಂಬಿದ ಸಾರಾ ಅವರು ಆಧುನಿಕ ಕಾಲದ ಮನುಷ್ಯ ಮನಸ್ಸು ಹೇಗೆ ಯೋಚಿಸಬೇಕೆಂಬುದಕ್ಕೆ ಮಾದರಿಯಾದವರು. ಅವರ ಅಗಲಿಕೆ ನೋವನ್ನುಂಟುಮಾಡಿದೆ ಎಂದು ದ .ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಹೇಳಿದರು.
ಅವರು ಉಳ್ಳಾಲ ಕಸಾಪ ಘಟಕದ ವತಿಯಿಂದ ಅಗಲಿದ ಸಾರಾ ಅಬೂಬಕ್ಕರ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.
ತಾಲೂಕು ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
Next Story