ಹೆಬ್ರಿ: ಆರ್ಥಿಕ ಹಿಂದುಳಿದ ಮೂವರು ಯುವತಿಯರ ಸರಳ ವಿವಾಹ

ಹೆಬ್ರಿ: ನಮ್ಮ ನಾಡ ಒಕ್ಕೂಟ, ಕೇಂದ್ರ ಸಮಿತಿ - ಹೆಬ್ರಿ ಘಟಕ ಹಾಗೂ ಇಸ್ಲಾಮಿಕ್ ಯೂತ್ ಫೆಡರೇಷನ್ ಬೆಳ್ವೆ ಆಶ್ರಯದಲ್ಲಿ ಬೆಳ್ವೆ ಜುಮ್ಮಾ ಮಸೀದಿ ಜಮಾಅತ್ ಕಮಿಟಿ ಮತ್ತು ಬೆಳ್ವೆಯ ಅನಿವಾಸಿ ಭಾರತೀಯರ ಸಹಕಾರದೊಂದಿಗೆ ಅಲ್ವಾಡಿ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಕೋವಿಡ್ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಮೂವರು ಯುವತಿಯರಿಗೆ ಸರಳ ವಿವಾಹ ನೆರವೇರಿಸಲಾಯಿತು.
ಬೆಳ್ವೆ ಮಸೀದಿಯ ಖತೀಬ್ ಮೌಲಾನ ಮುಹಮ್ಮದ್ ರಫೀಕ್ ನಿಕಾಹ ಖುತ್ಬಾ ಪಾರಾಯಣಗೈದರು. ಉಡುಪಿಯ ಮೌಲಾನ ಆಸಿಫ್ ಅಲ್ಬಡಿ ನಿಖಾಹ ನೆರವೇರಿಸಿದರು.
ಬೆಳ್ವೆ ಜುಮ್ಮಾ ಮಸೀದಿ ಆವರಣದಲ್ಲಿ ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹಮದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದ ನೇತೃತ್ವವನ್ನು ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು, ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಬೆಳ್ವೆ ಮತ್ತು ಬೆಳ್ವೆ ಇಸ್ಲಾಮಿಕ್ ಯೂತ್ ಫೆಡರೇಷನ್ ಅಧ್ಯಕ್ಷ ಮೊಹಮ್ಮದ್ ನಝೀರ್, ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಅಲ್ಬಾಡಿ ವಹಿಸಿದ್ದರು.
ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಷದಿ ಸರಳ ವಿವಾಹದ ಮಹತ್ವದ ಕುರಿತು ಮಾತನಾಡಿದರು. ನಮ್ಮ ನಾಡ ಒಕ್ಕೂಟದ ಕೇಂದ್ರ ಸಂಘಟನಾ ಕಾರ್ಯ ದರ್ಶಿ ಹುಸೇನ್ ಹೈಕಾಡಿ ಪ್ರಸ್ತಾವನೆಗೈದರು.
ಮುಖ್ಯಅತಿಥಿಗಳಾಗಿ ಉಡುಪಿ ಜಿಲ್ಲಾ ರೈತ ಸಂಘದ ಪ್ರದಾನ ಕಾರ್ಯ ದರ್ಶಿ ಸತೀಶ್ ಕಿಣಿ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸದಸ್ಯ ಕರುಣಾಕರ ಶೆಟ್ಟಿ, ಬೆಳ್ವೆ ಸಹಕಾರಿ ಸಂಘದ ಅಧ್ಯಕ್ಷ ಜಯರಾಂ ಶೆಟ್ಟಿ, ಬೆಳ್ವೆ ಶ್ರೀಶಂಕರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಶಂಕರ ಶೆಟ್ಟಿ, ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಕಾರ್ಯದರ್ಶಿ ಇಕ್ಬಾಲ್, ಉಪಾಧ್ಯಕ್ಷ ಶಕೀಲ್, ಕೋಶಾಧಿಕಾರಿ ಅನ್ಸಾರ್ ಬೆಳ್ವೆ, ಜೊತೆ ಕಾರ್ಯದರ್ಶಿ ಷರೀಫ್ ಬೆಳ್ವೆ, ಮದ್ರಸ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಬ್ಯಾರಿ, ಕಾರ್ಯದರ್ಶಿ ಇಸ್ಮಾಯಿಲ್, ಪೀರ್ ಸಾಹೇಬ್ ಉಡುಪಿ, ಇಸ್ಮಾಯಿಲ್, ಮುಸ್ಲಿಂ ಒಕ್ಕೂಟ ಉಡುಪಿ ತಾಲೂಕಿನ ಜಫ್ರುಲ್ಲ, ಉಡುಪಿ ಮಾಜಿ ತಾಪಂ ಸದಸ್ಯ ರಹ್ಮತುಲ್ಲ ಹುಡೆ, ದಿನಕರ ಶೆಟ್ಟಿ, ಇಸ್ಮಾಯಿಲ್ ಕೋಟೇಶ್ವರ, ಅನ್ವರ್ ಆಲ್ಬಾಡಿ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರಿನ ಕೋಡಿ ಬ್ಯಾರೀಸ್ ಗ್ರೂಪ್ ಕಾರ್ಯ್ಕ್ರಮಕ್ಕೆ ವಿಶೇಷ ಸಹಕಾರ ನೀಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.