ಕಚೇರಿಯ ಸೀಲ್ ದುರ್ಬಳಕೆ ಆರೋಪ: ಪುತ್ತೂರು ತಾಪಂ ಕಚೇರಿ ಸಿಬ್ಬಂದಿ ವಿರುದ್ದ ಕೇಸು ದಾಖಲು

ಪುತ್ತೂರು: ಕಚೇರಿಯ ಲೆಟರ್ ಹೆಡ್ ಮತ್ತು ಸೀಲ್ ದುರ್ಬಳಕೆ ಮಾಡಿದ ಆರೋಪದಡಿಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಸಿಬ್ಬಂದಿಯೋರ್ವರ ವಿರುದ್ದ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪುತ್ತೂರು ತಾಪಂನಲ್ಲಿ ಕಳೆದ ಹಲವು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಬೆರಳಚ್ಚುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಶಿವಾನಂದ ಎಂಬಾತ ತಾಪಂ ಲೆಟರ್ ಹೆಡ್ ಮತ್ತು ಸೀಲ್ ದುರುಪಯೋಗ ಪಡಿಸಿದ ಆರೋಪಿಯಾಗಿದ್ದು, ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಠಾಣೆಗೆ ದೂರು ನೀಡಿದ್ದಾರೆ. ನಗರ ಠಾಣೆಯಲ್ಲಿ ಈತನ ವಿರುದ್ದ 420 ಕೇಸು ದಾಖಲಾಗಿದೆ.
ಕಚೇರಿಯ ಮುಖ್ಯಸ್ಥರ ಗಮನಕ್ಕೆ ಬಾರದೆ ಕಚೇರಿಯ ಪತ್ರ ವ್ಯವಹಾರ ಮಾಡಲಾಗಿತ್ತು. ಇದಕ್ಕಾಗಿ ಕಚೇರಿಯ ಲೆಟರ್ ಹೆಡ್ ಮತ್ತು ಸೀಲ್ ಬಳಕೆ ಮಾಡಲಾಗಿತ್ತು. ಈ ರೀತಿ ಕಚೇರಿಯ ದಾಖಲನೆಗಳನ್ನು ಹೊರಗಿನ ವ್ಯಕ್ತಿಗಳಿಗೆ ನೀಡಿ ಸರ್ಕಾರಿ ಕರ್ತವ್ಯ ಉಲ್ಲಂಘನೆ ಮತ್ತು ವಿಶ್ವಾಸದ್ರೋಹ ಎಸಗಲಾಗಿದೆ. ಪ್ರಮುಖ ಪತ್ರ ವ್ಯವಹಾರವನ್ನು ಶಿವಾನಂದನೇ ಮಾಡಿರುತ್ತಾರೆ. ಅಲ್ಲದೆ ಹಲವು ಪತ್ರಗಳಿಗೆ ಈತನೇ ಸಹಿ ಹಾಕಿರುತ್ತಾರೆ.
ಸದ್ಯ ಆರೋಪಿಯ ವಿರುದ್ದ ದೂರು ದಾಖಲಿಸಲಾಗಿದೆ.





