ದಾವಣಗೆರೆ | ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣ: ಪಿಡಿಒ ನಾಗರಾಜ್ ಅಮಾನತು

ಜಗಳೂರು: ಆರ್‌ಟಿಐ ಕಾರ್ಯಕರ್ತ ರಾಮಕೃಷ್ಣ ಕೊಲೆ ಆರೋಪದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಪಿಡಿಓ ಎ.ಟಿ. ನಾಗರಾಜ್‌ರನ್ನು ಅಮಾನತುಗೊಳಿಸಿ ಜಿಪಂ ಸಿಇಓ ಡಾ.ಎ.ಚನ್ನಪ್ಪ ಆದೇಶ ಹೊರಡಿಸಿದ್ದಾರೆ.
ಕೊಲೆ ಆರೋಪ ಕೇಳಿ ಬಂದಿರುವ ಹಿನ್ನೆಲೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಗುತ್ತಿದುರ್ಗ, ಹಿರೇಮಲ್ಲನಹೊಳೆ ಮತ್ತು ಗುರುಸಿದ್ದಾಪುರ ಇಂಚಾರ್ಜ್ ಆಗಿದ್ದ ಎ.ಟಿ. ನಾಗರಾಜ್‌ರನ್ನು ಸೇವೆಯಿಂದ ಅಮಾನತಿನಲ್ಲಿಡಲಾಗಿದೆ. ಅಷ್ಟೇ ಅಲ್ಲ ತಕ್ಷಣದಿಂದ ನ್ಯಾಮತಿ ತಾಲೂಕು ಟಿ.ಗೋಪಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
Next Story





