ಮಂಗಳೂರು: ಕಾರು ಕಳವು
ಮಂಗಳೂರು: ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಾರು ಕಳವು ಮಾಡಿರುವ ಘಟನೆ ನೀರುಮಾರ್ಗ ಸಮೀಪದ ಕೆಲರೈ ಎಂಬಲ್ಲಿ ನಡೆದಿದೆ.
ವಿಜಯ ಕುಮಾರ್ ಎಂಬವರು ತನ್ನ ಮನೆಯಲ್ಲಿ ಕಾರನ್ನಿಟ್ಟು ವಿದೇಶಕ್ಕೆೆ ತೆರಳಿದ್ದರು. ಮಿತ್ರ ಕಿಣ್ ಕುಮಾರ್ ಬಳಿ ತನ್ನ ಮನೆಯನ್ನು ನೋಡಿಕೊಳ್ಳಲು ತಿಳಿಸಿದ್ದರು. ಕಿರಣ್ ಕುಮಾರ್ ಡಿ.31ರಂದು ಸಂಜೆ 6ಕ್ಕೆ ವಿಜಯ ಕುಮಾರ್ ಮನೆಗೆ ಹೋಗಿ ಕಾರು ಸ್ಟಾರ್ಟ್ ಮಾಡಿ ಹೋಗಿದ್ದರು.
ಜ.9ರಂದು ಸಂಜೆ 4ಕ್ಕೆ ಮತ್ತೆ ಆ ಮನೆಗೆ ಹೋದಾಗ ಮನೆಯ ಮುಖ್ಯ ಬಾಗಿಲನ್ನು ಯಾರೋ ಒಡೆದು ಒಳಪ್ರವೇಶಿಸಿ ಮನೆಯಲ್ಲಿ ಜಾಲಾಡಿರುವುದು ಮತ್ತು ಪಾರ್ಕಿಂಗ್ ಸ್ಥಳದಲ್ಲಿದ್ದ 8 ಲ.ರೂ. ಮೌಲ್ಯದ ಕಾರನ್ನು ಕಳವು ಮಾಡಿರುವುದು ಗಮನಕ್ಕೆೆ ಬಂದಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story